ವರದಿ ರಾಯಿ ರಾಜಕುಮಾರ
ಮೂಡುಬಿದಿರೆ: ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಪ್ರೀತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರತಿಭೆಯನ್ನು ಮೆರೆದ ಈ ವಿದ್ಯಾರ್ಥಿನಿಗೆ ರಾಷ್ಟ್ರ ಮಟ್ಟದಲ್ಲಿಯೂ ಯಶಸ್ಸು ಸಿಗಲೆಂದು ಹಾರೈಕೆ.

ಸಮಗ್ರ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ರಾಜ್ಯ ಮಟ್ಪದ ಈಜು ಸ್ಪರ್ಧೆಯಲ್ಲಿ 4*100 ಮೀ. ರಿಲೇಯಲ್ಲಿ ಪ್ರಥಮ, 400 ಮೀ. ಫ್ರೀ ಸ್ಟೈಲ್ ನಲ್ಲಿ ದ್ವಿತೀಯ, ಸ್ಥಾನವನ್ನು ಪಡೆದಿರುವುದನ್ನು ದಾಖಲಿಸಲಾಗಿದೆ. ಜಿಲ್ಲಾಮಟ್ಟದಲ್ಲಿಯೂ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳನ್ನು ಗಳಿಸಿದ್ದಳು. ವಿದ್ಯಾ ಭಾರತಿಯವರು ನಡೆಸಿದ ಸ್ವಿಮ್ಮಿಂಗ್ ನಲ್ಲಿ ಕೂಡ ರಾಜ್ಯಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದ ಈಕೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕೂಡ ಶಾಟ್ ಪುಟ್ ನಲ್ಲಿ ಪ್ರಶಸ್ತಿಯನ್ನು ಗಳಿಸಿದ್ದಳು. ಈಕೆ ಬಸವರಾಜ ಹಾಗೂ ಎಲಿಜಮ್ಮ ರ ಸುಪುತ್ರಿ.