ಮಂಗಳೂರು: ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ವಲಯ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಮೀನುಗಾರರಿಗೆ ಮೀನುಗಾರಿಕೆ ಸಲಕರಣೆ ಕಿಟ್, ಮತ್ಸ್ಯವಾಹಿನಿ ಯೋಜನೆಯಡಿ ಮೂರು/ನಾಲ್ಕು ಚಕ್ರದ ವಾಹನ ಖರೀದಿಗೆ ಸಹಾಯ ಹಾಗೂ ರಾಜ್ಯ ವಲಯ ಕಾರ್ಯಕ್ರಮದಡಿ ಮೀನುಗಾರರಿಗೆ ಜೀವರಕ್ಷಕ ಸಾಧನಗಳನ್ನು ವಿತರಿಸಲು ಅರ್ಹ ಮೀನುಗಾರ/ಮೀನು ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 6 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಉರ್ವಾ ಸ್ಟೋರ್ ಜಿಲ್ಲಾ ಪಂಚಾಯತ್ ಆವರಣದ ರೆಕಾರ್ಡ್ ಬಿಲ್ಡಿಂಗ್‍ನ ಮೊದಲನೇ ಮಹಡಿಯಲ್ಲಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಪುತ್ತೂರು ಕೋರ್ಟ್ ರೋಡ್ ತಾಲೂಕು ಪಂಚಾಯತ್ ಕಾರ್ಯಾಲಯದ 1ನೇ ಮಹಡಿಯಲ್ಲಿರುವ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.