ಉಡುಪಿ: 6 ಕರ್ನಾಟಕ ನೇವಲ್ ಯುನಿಟ್ ಎನ್.ಸಿ.ಸಿ, ಉಡುಪಿ ವತಿಯಿಂದ ಅಕ್ಟೋಬರ್ 01 ರಿಂದ 15 ರವರೆಗೆ ಸಾಗರ ನೌಕಾಯಾನ ಯಾತ್ರಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಕೆಡೆಟ್‍ಗಳು 27 ಫೀಟಿನ ಹಾಯಿ ದೋಣಿಗಳ ಮೂಲಕ ಮಲ್ಪೆ ಬಂದರಿನಿಂದ ನವ ಮಂಗಳೂರು ಬಂದರಿನವರೆಗೆ ಸಾಗರಯಾನವನ್ನು ಕೈಗೊಂಡು, ಅ.9 ರಿಂದ 14 ರೊಳಗೆ ವಾಪಾಸಾಗುವ ಸಾಗರ ನೌಕಾಯಾನ ಯಾತ್ರಾ ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ಎನ್.ಸಿ.ಸಿ ಕಚೇರಿಯ ದೂ.ಸಂ: 7033040313 ಅಥವಾ 8008015100 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ನೇವಲ್ ಯುನಿಟ್ ಕಮಾಂಡಿಂಗ್ ಅಧಿಕಾರಿಯ ಕಚೇರಿ ಪ್ರಕಟಣೆ ತಿಳಿಸಿದೆ.
