ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಸಮೀಸುತ್ತಿರುವ ಸಂದರ್ಭದಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಮತ್ತು ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲು ನಗರ ಪಾಲಿಕೆ ಕಮೀಷನರ್ ಇಂಜಿನಿಯರ್ ಸ್ ಗಳೊಂದಿಗೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಮಾತುಕತೆ, ಚರ್ಚೆ.
ಮಳೆಗಾಲ ಸಮೀಪಿಸುತ್ತಿರುವುದರಿಂದ ನಗರದ ವಿವಿಧ ಕಡೆಗಳಲ್ಲಿ ಉಂಟಾಗುವ ಕೃತಕ ನೆರೆ, ಮರಗಳು, ವಿದ್ಯುತ್ ಕಂಬಗಳ ಬಗ್ಗೆ 60 ವಾರ್ಡ್ಗಳಿಗೆ Incident Commanders ಗಳನ್ನು ನೇಮಕ ಮಾಡಿ ಅವರವರ ವಾರ್ಡ್ಗಳಿಗೆ ಹೋಗಿ ಕ್ರಮಕೈಗೊಳ್ಳಲು ಸೂಚನೆ ನೀಡಿದ್ಧಾರೆ ವಿದ್ಯತ್ ಕಂಬ, ವಿದ್ಯುತ್ ತಂತಿ ಬಗ್ಗೆ ಪರಿಶೀಲನೆ ಮಾಡಲು ಏಲ್ಲಾ ಎಕ್ಸಿಕ್ಯೂಟಿವ್ ಎಂಜಿನಿಯರ್ರವರು Incident Commanders ಗಳಿಗೆ ಸೂಚನೆ ನೀಡಿರುತ್ತಾರೆ. ಗುಡುಗು ಸಿಡಿಲಿನ ಸಂದರ್ಭದಲ್ಲಿ ವಿದ್ಯುತ್ ಅಟೋಮ್ಯಾಟಿಕ್ ಆಫ್ ಆಗುವಂತೆ ಯೋಜನೆ ರೂಪಿಸಲಾಗಿದೆ.
ರಾಜಕಾಲುವೆಯಲ್ಲಿ ಹೂಳೆತ್ತುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ ಅಪಾಯಕಾರಿ ಶಿಥಿಲಗೊಂಡಿರುವ ಮನೆಗಳಿಗೆ ತೀವ್ರ ನಿಗಾವಹಿಸಿಕೊಳ್ಳಲು, ಕೆಳಬಾಗದಲ್ಲಿರುವ ಮನೆಗಳು, ದೇವಸ್ಥಾನಗಳು ನೀರಿನಿಂದ ಹಾನಿಯಾಗದ ಕ್ರಮ ವಹಿಸಲು ಪೂರ್ವ ಸಿದ್ದತೆ ಮಾಡಲಾಗಿದೆ. ಎಂದು ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್ ರವರು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರಿಗೆ ಮಾಹಿತಿಯನ್ನು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಏಕ್ಸಿಕ್ಯೂಟಿವ್ ಎಂಜಿನಿಯರ್ ನರೇಶ್ ಶೆಣೈರವರೊಂದಿಗೆ ಚರ್ಚೆ ನಡೆಸಿ ಯಾವುದೇ ನೀರಿನ ಸಮಸ್ಯೆ ಬಾರದಂತೆ ಚರಂಡಿ ಕಾಲುವೆಗಳನ್ನು ಸ್ವಚ್ಚಗೊಳಿಸಿ ಮಳೆಯ ನೀರು ಸರಾಗವಾಗಿ ಹಾದು ಹೋಗುವಂತೆ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸಾಸಕರಾದ ಐವನ್ ಡಿʼಸೋಜಾರವರು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಯನ್ನು ನಡೆಸಿ ಮಳೆಗಾಲದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಯಾವುದೇ ತುರ್ತುಕೆಲಸಗಳ ಅಗತ್ಯವಿದ್ದಲ್ಲಿ ಸಾರ್ವಜನಿಕರು ಕೂಡಲೇ ಮನಪಾ ಕಮಿಷನರ್ ಎಂಜಿನಿಯರ್ ಗಳನ್ನು ಭೇಟಿ ಮಾಡಿ ಲಿಖಿತ ರೂಪದಲ್ಲಿ ದೂರನ್ನು ನೀಡಲು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.