ವರದಿ ರಾಯಿ ರಾಜಕುಮಾರ

ಮೂಡುಬಿದಿರೆ: ಕರ್ನಾಟಕ ದಕ್ಷಿಣ ಪ್ರಾಂತ ಅದಿವಕ್ತ ಪರಿಷತ್ ನ ಮೂಡುಬಿದಿರೆ ಘಟಕ ಮತ್ತು ಅಳ್ವಾಸ್ ಕಾನೂನು ಕಾಲೇಜು ಸಹಯೋಗದೊಂದಿಗೆ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಡಾ. ಶಿವರಾಮ ಕಾರಂತ ಸಭಾಂಗಣದಲ್ಲಿ ನವೆಂಬರ್ 22 ರಂದು ನಡೆಯಿತು. ಸಮಾರಂಭವನ್ನು ದೀಪ ಬೆಳಗಿ ಮಂಗಳೂರು ಕೆನರಾ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ.ಪಿ ಅನಂತ ಕೃಷ್ಣ ಭಟ್ ಸಂವಿಧಾನದಲ್ಲಿ ನೀಡಲಾದ ಕಾನೂನು ವಿಚಾರಗಳ, ವಿಟೋ ಅಧಿಕಾರಗಳ, ಯಾರನ್ನೇ ಆದರೂ ಪ್ರಶ್ನಿಸುವಂತಹ ಹಲವಾರು ವಿಷಯಗಳ ಬಗ್ಗೆ, ಪಾಲ್ಖೀವಾಲರ ಸಾಂದರ್ಭಿಕ ಮಾಹಿತಿಗಳ ಬಗ್ಗೆ ಉಲ್ಲೇಖವನ್ನು ಮಾಡಿದರು. 

ಅಧ್ಯಕ್ಷತೆ ವಹಿಸಿದ್ದ ಅಧಿವಕ್ತಾ ಪರಿಷತ್ ಅಧ್ಯಕ್ಷ ಅನಿಲ್ ಕುಮಾರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರಾಷ್ಟ್ರೀಯ ವಿಚಾರಧಾರೆಯನ್ನು ಹೊಂದಿರುವ ವಕೀಲರ ಸಂಘಟನೆಯು ಜನಸಾಮಾನ್ಯರ ಕಷ್ಟ, ತೊಂದರೆಗಳಿಗೆ ಸ್ಪಂದಿಸುತ್ತಿದ್ದು ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದೆ ಎಂದರು.

ಸುಳ್ಯದಲ್ಲಿ ನಡೆಸಿದ ಹಲವಾರು ಜನಹಿತ ಕಾರ್ಯಕ್ರಮಗಳನ್ನು ದಕ್ಷಿಣ ಪ್ರಾಂತ ಅಧಿವಕ್ತಾ ಪರಿಷತ್ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ ತಿಳಿಸಿದರು.

ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಕೆ ಆರ್ ಪಂಡಿತ್, ಪರಿಷತ್ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶ್ವೇತಾ ಜೈನ್, ಕಾನೂನು ಕಾಲೇಜಿನ ಪ್ರಾಂಶುಪಾಲ ಮಹಂತೇಶ್ ಜಿಎಸ್, ಪರಿಷತ್ ನ ಅಧ್ಯಕ್ಷ ಡಿವಿಜೇಂದ್ರ ಕುಮಾರ್, ಉಪಸ್ಥಿತರಿದ್ದರು. 

ಪರಿಷತ್ ನ ಪ್ರಧಾನ ಕಾರ್ಯದರ್ಶಿ ಜಗದೀಶ್ ಡಿ ಪಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮೀಕ್ಷಾ ಶೆಟ್ಟಿ, ಕಾರ್ಯಕ್ರಮ ನಿರ್ವಹಿಸಿದರು. ನ್ಯಾಯವಾದಿ ಶುಭ ಸಹನ ವಂದೇ ಮಾತರಂ ಗೀತೆ ಪ್ರಸ್ತುತಪಡಿಸಿದರು.  ಜಿಲ್ಲಾ ಅದಿವಕ್ತಾ ಪರಿಷತ್ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ವಂದಿಸಿದರು.