ಚಿತ್ರ / ವರದಿ : ರೋನ್ಸ್ ಬಂಟ್ವಾಳ್
ಮುಂಬಯಿ: ತ್ವರಿತ ಮತ್ತು ಸಂತೃಪ್ತ ಗ್ರಾಹಕ ಸೇವೆಗೆ ಸರಿಸಾಟಿಯಾದ ಬ್ಯಾಂಕ್ ಮತ್ತೊಂದಿಲ್ಲದ ಕಾರಣ ಭಾರತ್ ಬ್ಯಾಂಕ್ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ನಾವು ಗ್ರಾಹಕಸ್ನೇಹಿ ಸೇವೆಯನ್ನೇ ಉದ್ದೇಶವಾಗಿಸಿ ಅಭಿವೃದ್ಧಿ ಪಥದ ಎಲ್ಲ ಮೆಟ್ಟಿಲುಗಳನ್ನು ಹಂತಹಂತವಾಗಿ ಏರುತ್ತಾ ಈ ಮಟ್ಟಕ್ಕೆ ಬೆಳೆದಿದ್ದೇವೆ. ಆದ್ದರಿಂದ ಭಾರತ್ ಬ್ಯಾಂಕ್‌ಗೆ ಗ್ರಾಹಕರೇ ಸರ್ವಶ್ರೇಷ್ಠ ಗಣ್ಯರು. ನಾವು ಆಧುನಿಕರಣಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಾಗಿರುವುದು ನಿಜವೂ, ಅನಿವಾರ್ಯವೂ ಹೌದು. ಆದರೆ ಹಳೆಯ ಹಾದಿಯನ್ನು ಮರೆಯದೆ ಮುನ್ನಡೆಯುವುದೂ ಅದಕ್ಕಿಂತಲೂ ಅತ್ಯವಶ್ಯಕ ಆಗಿರಲಿ. ಬದಲಾವಣೆಯ ಸೇವೆಯಿಂದ ಭಾರತ್ ಬ್ಯಾಂಕ್ ಬಲಾಢ್ಯಗೊಂಡಿದೆ. ಎಲ್ಲಿದ್ದ ಭಾರತ್ ಬ್ಯಾಂಕ್ ಎಲ್ಲಿಗೆ ಸಾಗಿ ಬಂದಿದೆ ಅನ್ನುವುದರ ಅವಲೋಕನ ಮಾಡಿಕೊಂಡು ಸಾಗಿದಾಗ ಬ್ಯಾಂಕ್ ತನ್ನಿಂದತಾನೇ ಇನ್ನಷ್ಟು ಸರ್ವೋನ್ನತಿ ಸಿದ್ಧಿಸಲು ಸಾಧ್ಯವಾಗುವುದು ಎಂದ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ತಿಳಿಸಿದರು.

ಭಾರತ್ ಕೋ. ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಸ್ಥಳಾಂತರಿತ ಜೋಗೇಶ್ವರಿ ಪೂರ್ವದ ಶಾಖೆಯನ್ನು ಸ್ಥಾನೀಯ ಸುಭಾಷ್ ರೋಡ್‌ನಲ್ಲಿನ ಲಾ ಪ್ರೆಂಡ ಕಟ್ಟಡದಲ್ಲಿ ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ಶುಭಾರಂಭ ಗೊಳಿಸಿದ್ದು, ರಿಬ್ಬನ್ ಬಿಡಿಸಿ ಶಾಖೆಯನ್ನು ಸೇವಾರ್ಪಣೆಗೊಳಿಸಿ ಬಳಿಕ ಗಣ್ಯರನ್ನೊಳಗೊಂಡು ದೀಪ ಬೆಳಗಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತು ಸೂರ್ಯಕಾಂತ್ ಮಾತನಾಡಿದರು.

ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಸೋಮನಾಥ ಬಿ. ಅಮೀನ್ ಎಟಿಎಂ ಸೇವೆಗೆ ಚಾಲನೆಯನ್ನಿತ್ತರು. ಶಿವಸೇನಾ (ಯುಬಿಟಿ ) ನೇತಾರ, ಜೋಗೇಶ್ವರಿ ಪೂರ್ವದ ಶಾಸಕ ಅನಂತ್ ಭೀಕು (ಬಾಳ) ನಾರ್, ಹಿರಿಯ ಸಮಾಜ ಸೇವಕರಾದ ಬಾಬು ಕೆ. ಪೂಜಾರಿ ಅಂಧೇರಿ, ಲಕ್ಷ್ಮಣ್ ಸಿ.ಪೂಜಾರಿ (ಎನ್‌ಸಿಪಿ),ಉದ್ಯಮಿಗಳಾದ ಶ್ರೀದೇವಿ ಕಫೂರ್, ನೀಲ್‌ಕಾಂತ್ ಶ್ಹಾ, ಇಮ್ರಾನ್ ಶೇಖ್, ಕಮಲ್ ಅಗರ್ವಾಲ್, ಭರತ್ ರಾಥೋಡ್ ಉಪಸ್ಥಿತರಿದ್ದು ಶುಭಾರೈಸಿದರು.

ಬ್ಯಾಂಕ್‌ನ ನಿರ್ದೇಶಕ ಗೌರೇಶ್ ಆರ್.ಕೋಟ್ಯಾನ್ ಮಾತನಾಡಿ ಭಾರತ್ ಬ್ಯಾಂಕ್ ಎಲ್ಲಾ ಸಮಯಕ್ಕೂ ಸಮಂಜಸವಾಗಿ ಸೇವಾ ನಿರತವಾಗಿರುವುದು ಪ್ರಶಂಸನೀಯ. ಆರಂಭದಿಂದಲೂ ಸ್ಥಿರ ಸೇವೆಗೆ ಸಾಕ್ಷಿಯಾಗಿದ್ದು ಇಂದಿಗೂ ಅದನ್ನೇ ಮುನ್ನಡೆಸಿ ಬದ್ಧವಾಗಿ ಕಾರ್ಯಚರಿಸುತ್ತಿರುವುದು ಸ್ತುತ್ಯರ್ಹ. ಇಂತಹ ಸೇವೆಯು ಇನ್ನೂ ಮುಂದುವರಿಯಲಿ ಎಂದು ಶುಭಶಂಸನೆ ಗೈದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ನಿರ್ದೇಶಕರುಗಳಾದ ಚಂದ್ರಶೇಖರ ಎಸ್.ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಮೋಹನ್‌ದಾಸ್ ಜಿ.ಪೂಜಾರಿ, ಸಂತೋಷ್ ಕೆ.ಪೂಜಾರಿ, ನಿರಂಜನ್ ಎಲ್.ಪೂಜಾರಿ, ಗಣೇಶ್ ಡಿ.ಪೂಜಾರಿ, ಸುರೇಶ್ ಬಿ.ಸುವರ್ಣ, ಜಯಲಕ್ಷ್ಮಿ ಪಿ.ಸಾಲ್ಯಾನ್, ಜಯಶ್ರೀ ಮೋಹನ್‌ದಾಸ್ ಹೆಜ್ಮಾಡಿ, ಆಡಳಿತ ಮಂಡಳಿಯ ಸದಸ್ಯ ನಿತ್ಯಾನಂದ ಡಿ.ಕೋಟ್ಯಾನ್ (ಮಾಜಿ ಮಹಾ ಪ್ರಂಬಧಕ) ಹಾಗೂ ಆಡಳಿತ ನಿರ್ದೇಶಕ ಮತ್ತು ಸಿಇಒ ವಿದ್ಯಾನಂದ ಎಸ್. ಕಾರ್ಕೆರಾ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ.ಸಾಲ್ಯಾನ್ ಪ್ರಧಾನವಾಗಿ ಉಪಸ್ಥಿತರಿದ್ದರು.

ಈ ಶುಭಾವಸರದಿ ಸಮಾಜ ಸೇವಕರಾದ ಮುದ್ದು ಸಿ.ಸುವರ್ಣ ಜೋಗೇಶ್ವರಿ, ರೋಹಿತ್ ಎನ್.ಪೂಜಾರಿ, ಸುಜಾತ ಎನ್.ಪೂಜಾರಿ, ಉದ್ಯಮಿಗಳಾದ ಬೆಲಿ ಮೌರ್ಯ, ಮಧುಸೂದನ್ ರಾವ್, ರಾಮ್‌ಜೀ ಗಡಾ, ಭವಾನಿ ಗಡಾ, ಬಕೂಲ್ ಪಾಟೇಲ್, ಸೊರಬ್ ಬಿಲ್ಲಿಮೋರಿಯಾ, ಕೆ. ದಂತಲ್, ನಿವೃತ್ತ ಮಹಾ ಪ್ರಂಬಧಕಿ ಶೋಭಾ ದಯಾನಂದ್, ನ್ಯಾ| ಡಾ| ಯು.ಧನಂಜಯ್ ಕುಮಾರ್, ವಸಂತ್ ಹೆಜ್ಮಾಡಿ, ವಿಜಯ್ ಸನಿಲ್, ಅಶೋಕ್ ಕುಕ್ಯಾನ್, ಅಬಿವೃದ್ಧಿ ಇಲಾಖೆಯ ಕಿರಣ್‌ಕುಮಾರ್ ಬಿ.ಅವಿನ್, ಪ್ರವೀಣ್ ಕೋಟ್ಯಾನ್, ಮಾರ್ಕೇಟಿಂಗ್ ವಿಭಾಗದ ರೋಹಿತ್ ಉದ್ಯಾವರ್, ಸುಜೀತ್ ಜಿ.ಕೋಟ್ಯಾನ್, ಯಾದವ ಬಂಗೇರಾ, ಭಾರತ್ ಬ್ಯಾಂಕ್ ಆಫೀಸರ್‍ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಅವೀಶ್ ಪೂಜಾರಿ (ಅಬಿವೃದ್ಧಿ ಇಲಾಖೆ), ಜತೆ ಕೋಶಾಧಿಕಾರಿ ದಿನೇಶ್ ಸನಿಲ್ ಸೇರಿದಂತೆ ಇತರ ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು, ಶಾಖಾ ಸಿಬ್ಬಂದಿಗಳು, ಜಿತೇಶ್ ಕೋಟ್ಯಾನ್ ಉಪಸ್ಥಿತರಿದ್ದು ಪಲ್ಲಟಿತ ಶಾಖೆಯ ಸರ್ವೋನ್ನತಿಗೆ ಶುಭಾರೈಸಿದರು.

ರವೀಂದ್ರ ಎ.ಶಾಂತಿ ತನ್ನ ಪೌರೋಹಿತ್ಯದಲ್ಲಿ ಗಣ ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಸಿ ಮಂಗಳಾರತಿ ನೆರವೇರಿಸಿ ಹರಸಿದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಯತೀಶ್ ಉದ್ಯಾವರ್ ಹಾಗೂ ನಿತ್ಯಾಶ್ರೀ ಸಾಲ್ಯಾನ್ ಮತ್ತು ಸುಮಾಂತ್ ಸಾಲ್ಯಾನ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.




ಪ್ರಥಿ ಸುಂದರ್ ಕೋಟ್ಯಾನ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಸೂರ್ಯಕಾಂತ್ ಸುವರ್ಣ ಅತಿಥಿಗಳಿಗೆ ಪುಷ್ಪಗುಪ್ಛವನ್ನಿತ್ತು ಗೌರವಿಸಿದರು. ಶಾಖಾ ಮುಖ್ಯಸ್ಥೆ ಕೃತಿಕಾ ಎ.ಸನಿಲ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಉಪ ಮುಖ್ಯಸ್ಥೆ ಉಮಾ ರೋಹಿತ್ ಕಾಮತ್ ಕೃತಜ್ಞತೆ ಸಮರ್ಪಿಸಿದರು.