ವರದಿ ರಾಯಿ ರಾಜಕುಮಾರ್

ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಧ್ಯಕ್ಷರಾಗಿದ್ದು, ಪ್ರಸ್ತುತ ಸದಸ್ಯರಾಗಿದ್ದ, ಶ್ರೀನಾಥ್ ಸುವರ್ಣ ಅವರ ಅಕಾಲಿಕ ದುರ್ಮರಣದ ತರುವಾಯ ಕುಟುಂಬಸ್ಥರು ಹಾಗೂ ಊರ ಜನರು ಸೇರಿ ವಿಶೇಷವಾದ ಫಾರ್ಮನ್ನು ಲೋಕಾರ್ಪಣೆ ಗೊಳಿಸಿದರು. 

ಈ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಎಮ್ ಅವರು ಉತ್ತಮ ಕಾರ್ಯವನ್ನು ಮಾಡಿ ಜನಾನುರಾಗಿ ಯಾಗಿ ಎಲ್ಲರ ಪ್ರಶಂಸೆಗೆ ಹಾಗೂ ಊರಿನ ಏಳಿಗೆಗೆ ಪ್ರಯತ್ನಿಸಿದ ಶ್ರೀನಾಥದ ಗುಣಗಾನವನ್ನು ಮಾಡಿದರು. ತನ್ನ ಪ್ರದೇಶದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಪಂಚಾಯತ್ ನ ಮೂಲಕ ಮಾಡಿದ್ದಕ್ಕೆ ಅವರ ನೆನಪಿಗಾಗಿ ಫಾರಂ ಲೋಕಾರ್ಪಣೆಗೊಳಿಸುತ್ತಿದ್ದೇನೆ ಎಂದು ಶುಭವನ್ನು ಹಾರೈಸಿದರು. 

ಈ ಸಂದರ್ಭದಲ್ಲಿ ಶ್ರೀನಾಥ್ ರ ಆತ್ಮೀಯರು, ಪಂಚಾಯತ್ ಸದಸ್ಯರುಗಳು ಇತ್ಯಾದಿಯರು ಹಾಜರಿದ್ದರು.