ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಹಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದ್ರಿ ತಾಲೂಕು ಹಾಗೂ ಸಂತ ಥೋಮಸ್ ವಿದ್ಯಾ ಸಂಸ್ಥೆಗಳು ಅಲಂಗಾರು ಇವರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದ್ರಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ 2025- 2026 ಇಂದು ಅಲಂಗಾರಿನ ಸಂತ ಥೋಮಸ್ ವಿದ್ಯಾಸಂಸ್ಥೆಯ ವಾಲಿಬಾಲ್ ಮೈದಾನದಲ್ಲಿ ಉದ್ಘಾಟನೆಗೊಂಡಿತು.
ರೆ.ಫಾ. ಮೆಲ್ವಿನ್ ನೋರೋನ್ಹ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನ ಸಮಾರಂಭದಲ್ಲಿ ಮೂಡಬಿದ್ರಿ ವಾಲಿಬಾಲ್ ಅಸೋಶಿಯೇಷನ್ ಅಧ್ಯಕ್ಷ ಡಾ ವಿನಯ್ ಆಳ್ವ , SKF ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರು ತೇಜಸ್ ಆಚಾರ್ಯ , ಪುರಸಭಾ ಸದಸ್ಯರು ಪಿಕೆ ಥೋಮಸ್ , ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ನವೀನ್ ಪುತ್ರನ್ , ನಾಗೇಶ್ ಕುಮಾರ್ , ಶಿವಾನಂದ ಕಾಯ್ಕಿಣಿ , ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರಾಜೇಶ್ ಕಡಲಕೆರೆ , ಎಡ್ವಾರ್ಡ್ ಸೇರವೋ , ರಾಜ ಡಿಸೋಜಾ , ಜಾನೆಟ್ ಮಿರಾoದ, ಶಾಲಾ ಮುಖ್ಯೋಪಾಧ್ಯಾಯರುಗಳಾದ ಸಿಲ್ವಿಯ ಡೆಸ ,ಅಲ್ಪೊನ್ಸ , ದೈಹಿಕ ಶಿಕ್ಷಕ ಉದಯ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.