ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದ ಲಾಡಿ ಚತುರ್ಮುಖ ಬ್ರಹ್ಮನ ಬ್ರಹ್ಮಕಲಶೋತ್ಸವ ಫೆಬ್ರವರಿ 16 ರಂದು ನಡೆಯಿತು. ಮುರಳೀಧರ ತಂತ್ರಿಗಳು ಬಾಲ ಗಣಪತಿ ಹೋಮ, ಬ್ರಹ್ಮ ಕಲಶಾಭಿಷೇಕ, ನ್ಯಾಸ ಪೂಜೆ, ಅವಸೃತ ಬಲಿ, ಪಲ್ಲ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು. 

ಅರ್ಚಕ ಸುಧಾಕರ ಭಟ್, ಪವಿತ್ರ ಪಾಣಿ ರಾಘವೇಂದ್ರ ರಾವ್, ಸಮಿತಿಯ ಅಧ್ಯಕ್ಷ ಎ.ಕೆ.ರಾವ್, ಗಣೇಶ್ ರಾವ್, ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಅರಮನೆಯ ಸುಕುಮಾರ್ ಶೆಟ್ಟಿ ಸಹಕರಿಸಿದರು. ವೇದಿಕೆಯಲ್ಲಿ ವಾದನ, ಭಜನಾ ಸಂಕೀರ್ತನೆ ನಡೆಯಿತು. ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಶ್ರೀಪತಿ ಭಟ್, ಸುದರ್ಶನ್ ಎಂ, ನಾರಾಯಣ ಪಿಎಂ, ಕೆ.ಆರ್.ಪಂಡಿತ್, ಪ್ರೇಮನಾಥ ಮಾರ್ಲ, ಶ್ರೀಧರ ಭಟ್, ಡಾ.ಜಯಗೋಪಾಲ ತೋಳ್ಪಾಡಿ, ಚಂದ್ರಹಾಸ ದೇವಾಡಿಗ, ಹಾಗೂ ಇತರರು ಹಾಜರಿದ್ದರು.