ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಕಾರ್ಯಕ್ರಮ ಈ ವರ್ಷ ಆಳ್ವಾಸ್ ಕಾಲೇಜಿನಲ್ಲಿ ನಡೆಯಲಿದೆ. ಜುಲೈ 26ರಂದು ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಜಿಲ್ಲೆಗಳ ಸಾಧಕ ಪ್ರಾಧ್ಯಾಪಕರುಗಳ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 

2023 ರಿಂದ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಈ ವರ್ಷ ಜೀವಮಾನ ಸಾಧನೆಗಾಗಿ ಮಾಹೆ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್, ಮೇಘಾಲಯ ಸರಸ್ವತಿ ಸಮೂಹ ವಿದ್ಯಾಸಂಸ್ಥೆಯ ಸ್ಥಾಪಕ ಡಾ. ಅನಂತ ಕೃಷ್ಣ ಭಟ್, ಕಾಲೇಜು ಆಡಳಿತ ನಿರ್ವಹಣೆಯ ಸಾಧಕರಾಗಿ ಆಳ್ವಾಸ್ ನ ಡಾ. ಕುರಿಯನ್, ಕೆನರಾ ಕಾಲೇಜಿನ ಡಾ. ಪ್ರೇಮಲತಾ, ಸಂಶೋಧನೆಯಲ್ಲಿ ಸಾಧಕ ಮಣಿಪಾಲದ ಪ್ರೊ. ಹರೀಶ್ ಜೋಶಿ, ಎಜೆ ಯ ಡಾ. ಶಾಂತರಾಮ ರೈ, ಉತ್ತಮ ಶಿಕ್ಷಕ ಪ್ರಶಸ್ತಿ ವಿಶ್ವವಿದ್ಯಾಲಯ ಕಾಲೇಜಿನ ಡಾ. ಸುಭಾಷಿಣಿ ಶ್ರೀವತ್ಸ, ಉಡುಪಿ ಅಜ್ಜರಕಾಡು ಕಾಲೇಜಿನ ಡಾ. ರಾಜೇಂದ್ರ ಜೆ, ಅತ್ಯುತ್ತಮ ಗ್ರಂಥಪಾಲಕ ಮಡಿಕೇರಿಯ ಪ್ರೊ. ವಿಜಯಲತ, ಉಡುಪಿ ಕಾಪು ವಿನ ಡಾ. ಯಶೋಧ, ಉತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಬೆಳ್ತಂಗಡಿಯ ಡಾ. ರಾಧಾಕೃಷ್ಣ, ವಿರಾಜಪೇಟೆಯ ತಮ್ಮಯ್ಯ ರನ್ನು ಆಯ್ಕೆ ಮಾಡಿದ್ದು ಸನ್ಮಾನಿಸಲಾಗುವುದು.

ಇದೇ ಸಂದರ್ಭದಲ್ಲಿ ಪಿ ಎಚ್ ಡಿ ಪದವಿ ಪಡೆದ ಸಂಶೋಧನಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಕೆ ಆರ್ ಎಂ ಎಸ್ ಎಸ್ ರಾಜ್ಯಾಧ್ಯಕ್ಷ ಡಾ. ಗುರುನಾಥ ಬಡಿಗೇರ್, ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂಕೆ ಜುಲೈ 23ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಎಂ ಆಳ್ವ ಹಾಗೂ ಪ್ರೊಫೆಸರ್ ಗಳಾದ ವಾಣಿ, ವೆಂಕಟೇಶ ನಾಯಕ್, ರಾಜೇಶ್ ಕುಮಾರ್ ಮತ್ತು ಇತರರು ಹಾಜರಿದ್ದರು.