ಬಾನಂಗಳದಲ್ಲಿ ಕವಿದಿರುವ ಕಾರ್ಮೊಡವೇ

ಯಾಕಿಷ್ಟು ಮುನಿಸು? 

ಧರೆಗೆ ನಿನ್ನ ಆನಂದಬಾಷ್ಪ ಸುರಿಸಲಾರೆಯಾ? 

ಮುನಿಸಿನ ಕಾರಣವಾದರೂ ತಿಳಿಸು


ರೈತ ಭಾಂದವ ಗೋಗರೆವನು

ಸ್ರಷ್ಟಿಕರ್ತನಿಗೆ ಕೈಯನು ಮುಗಿಯುತ

ಬೆಳೆ ಬೆಳೆಯಲು ಹಾತೊರೆಯುವನು

ನಿನ್ನಯ ಪ್ರೀತಿಯ ಸಹಾಯ ಕೋರುತ


ಗಿಡ, ಮರ, ಪ್ರಕ್ರತಿ ಪ್ರತಿಭಟಿಸುತ್ತಿದೆ

ಹಸುರಿನ ಉಡುಗೆ ತೊರೆದು ಕೆಂಪನು ಧರಿಸಿದೆ

ಬಿಸಿಲ ಭೇಗೆಗೆ ಧರೆಯು ಬಾಯ್ಬಿಟ್ಟಿದೆ

ಬೆಂಕಿ ಜ್ವಾಲೆಯ ಉಗುಳುತ್ತಿದೆ


ನದಿ, ಹಳ್ಳಗಳೆಲ್ಲವೂ ಬರಿದಾದ ಸುಡುಗಾಡು

ಅದರೊಡನೆ ಪಶು, ಪಕ್ಷಿಗಳ ಒಡನಾಟದ ಬೀಡು

ಅವೆಲ್ಲವೂ ಮರೆತ್ತಿವೆ ಸಂತಸದ ಕ್ಷಣ

ಇದಕ್ಕೆಲ್ಲವೂ ನಿನ್ನ ಮುನಿಸೇ ಕಾರಣ


ಓ ಗಗನವೇ ಬಿಡು ನಿನ್ನ ಹಠಮಾರಿತನ

ಭೂಮಿಗೆ ಸುರಿಸು ನಿನ್ನ ಮಳೆಹನಿ ಸಿಂಚನ

ಒಣಗಿದ ಪ್ರಕ್ರತಿ ಕಾಣಲಿ ಹಸುರಿನ ಹೊಸತನ

ಸಕಲ ಜೀವಿಗಳು ನಲಿದಾಡಲಿ ಸಾರುತ ನಿನ್ನ ಗುಣಗಾನ

✍️ವಿಲ್ಲಿ ಅಲ್ಲಿಪಾದೆ