ಮುಂಬಯಿ, ಅ. 31: ಚಾರ್ಕೋಪ್ ಕನ್ನಡಿಗರ ಬಳಗದ 17ನೇ ವಾರ್ಷಿಕ ಮಹಾಸಭೆಯು ಕಳೆದ ಶನಿವಾರ (ಅ.26) ಪೊಯ್ಸರ ಜಿಮ್ಖಾನದ ಸಭಾಂಗಣದ ಕಾಂದಿವಾಲಿ ಪಶ್ಚಿಮ ಇಲ್ಲಿ ನಡೆಯಿತು. 

ಬಳಗದ ಅಧ್ಯಕ್ಷ ರವೀಂದ್ರ ಎಂ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೇರವೇರಿದ ಸಭೆಯಲ್ಲಿ ಮಹಿಳಾ ವಿಭಾಗದ ಕಾರ್ಯದರ್ಶಿ ಶಾಂತ ಯನ್ ಭಟ್  16ನೇ ವರ್ಷದ ವಾರ್ಷಿಕ ವರದಿಯನ್ನು ವಾಚಿಸಿದರು . ವಾರ್ಷಿಕ ಲೆಕ್ಕ ಪತ್ರವನ್ನು ಯಾವುದೇ ವಿರೋಧವಿಲ್ಲದೆ ಅಂಗೀಕರಿಸ ಅಂಗೀಕರಿಸಲಾಯಿತು. ಮುಂದಿನ 2024 -2025 ವರ್ಷಕ್ಕೆ ಆಂತರಿಕ ಲೆಕ್ಕ ಪರಿಶೋಧಕರಾಗಿ ಸದಾಶಿವ ಸಿ. ಪೂಜಾರಿ ಹಾಗು ಬಾಹ್ಯ ಲೆಕ್ಕ ಪರಿಶೋಧಕರಾಗಿ ವಿಲಾಸ್ ಮಡ್ವಿ ಆಂಡ್ ಕಂಪೆನಿ ಇವರನ್ನು ನೇಮಿಸಲಾಯಿತು. ದಿವಂಗತ ವಿಶ್ವಸ್ಥರಾದ ಎಮ್ ಎಸ್ ರಾವ್ ಅವರ ಜಾಗದಲ್ಲಿ ಅವರ ಪತ್ನಿ ಭಾರತಿ ರಾವ್ ಅವರನ್ನು ಸರ್ವಾನುಮತದಿಂದ ಮೂರನೇ ವಿಶ್ವಸ್ಥರಾಗಿ ನೇಮಿಸಲಾಯಿತು .

ರವೀಂದ್ರ ಎಂ ಶೆಟ್ಟಿ ಮಾತನಾಡಿ ಬಳಗದ ಹಿರಿಯರ ಕೊಡುಗೆ- ಪ್ರೋತ್ಸಾಹ, ಕಾರ್ಯಕಾರಿ ಸಮಿತಿ ಹಾಗು ಉಪ ಕಾರ್ಯಕಾರಿ ಸಮಿತಿಯ ಪರಿಶ್ರಮ, ದಾನಿಗಳು ಹಾಗು ಹಿತೈಷಿಗಳ ಸಲಹೆ-ಸೂಚನೆಯಿಂದ  ಈ ಬಳಗವನ್ನು ನನ್ನ ಅಧ್ಯಕ್ಷತೆಯಲ್ಲಿ ಮುನ್ನಡೆಸುವ ಚಲದೊಂದಿಗೆ ಕಾರ್ಯಕ್ಕಿಳಿದಿದ್ದೇನೇ. ಇದಕ್ಕೆ ನಿಮ್ಮೆಲ್ಲರ ಸಹಕಾರ ಮತ್ತು ಆಶೀರ್ವಾದದ ಅಗತ್ಯವಿದೆ. ಭಾರತಿಯ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಹಾಗು ಕನ್ನಡದ ಕಂಪನ್ನು ಉಳಿಸಿ ಬೆಳೆಸುವಲ್ಲಿ ದಕ್ಸಿಣ ಕನ್ನಡ  ಜಿಲ್ಲೆಯ ಉದ್ಯಮಿಗಳ ಕೊಡುಗೆ ಅಪಾರ ಅದರಿಂದ ಮುಂದಿನ ದಿನ ಗಳಲ್ಲಿ ನಮ್ಮ ಸಂಸ್ಥೆ ಗೆ ಎಲ್ಲರ ಸಹಕಾರ ಅಗತ್ಯ ಎಂದು  ಳಿಸಿದರು. 

ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಧನವನ್ನು ನೀಡಿ ಸನ್ಮಾನಿಸಲಾಯಿತು. 

ವಿಶ್ವಸ್ಥರಾದ ಜಯ ಸಿ ಶೆಟ್ಟಿ, ಮಾಜಿ ಅಧ್ಯಕ್ಷರಾದ  ಕೃಷ್ಣ ಎಂ ಶೆಟ್ಟಿ ,ಮಲಾಡ್ ಕನ್ನಡ ಸಂಘದ ಶಂಕರ್ ಡಿ ಪೂಜಾರಿ, ಡಾಕ್ಟರ್. ಎನ್ ಜಿ.ಭಟ್, ಪೇಟೆಮನೆ ಪ್ರಕಾಶ್ ಶೆಟ್ಟಿ, ಪೋಷಕರಾದ  ಶಶಿಧರ ಹೆಗ್ಡೆ, ಮೊದಲಾದವರು ಸಂಸ್ಥೆಯ ಮುಂದಿನ ಅಭಿವೃದ್ಧಿಯ ಉದ್ದೇಶ ಕಾಗಿ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. 

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಹುಮತದಿಂದ ಆಯೇಕೆ ಅದ ಚಾರ್ಕೋಪ್ ಕನ್ನಡಿಗರ ಬಳಗದ ಹಿರಿಯ ಸದಸ್ಯರು ಶಂಕರ್ ಡಿ ಪೂಜಾರಿ ಹಾಗು ಲತಾ ವಿಜಯ ಬಂಗೇರ ಇವರುಗಳನ್ನು ಗೌರವ ಮಾಡಲಾಯಿತು.

ಬಳಗದ ವಿಶ್ವಸ್ಥರಾದ ಭಾಸ್ಕರ್ ಸರಪಾಡಿಯವರು  ಮಾತನಾಡುತ್ತಾ ಬಳಗವು ಕಳೆದ ಹಲವು ವರ್ಷಗಳಿಂದ ಸಾಂಸ್ಕೃತಿಕ  ಹಾಗು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮಹತ್ವವನ್ನು ನೀಡುತ್ತಾ ಬಂದಿದೆ. ಈಗ ನಮ್ಮ ಬಳಗವು ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಕಾಲಿಡುತ್ತಿದೆ. ಬರುವ ವರ್ಷದ ನವರಾತ್ರಿಯ ಶಾರದಾ ಮಹೋತ್ಸವದ ವರೆಗೆ, ವಿವಿಧ ರೀತಿಯ ಹಲವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಾರ್ಯಕಾರಿ ಸಮಿತಿಯ ಜೊತೆಕೂಡಿ ತೀರ್ಮಾನಿಸಲಾಗಿದೆ ಎಂದು ತಮ್ಮ  ಮನದಾಳದ ಮಾತುಗಳನ್ನು ನುಡಿದರು.

ಮಹಾಸಭೆಯಲ್ಲಿ ಗೌರವ ಸಲಹೆಗಾರ ಕರುಣಾಕರ ಕಣ್ಣರಪ್ಪಾಡಿ ,ಪೊಯ್ಸರ ಜಿಮ್ಖಾನದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ,  ಕೋಶದಿಕಾರಿ ರಾಜೀವಿ ಆರ್ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಪದ್ಮಾವತಿ  ಬಿ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ರೂಪ ಭಟ್, ಜೊತೆ ಕೋಶದಿಕಾರಿ ಲತಾ ಬಂಗೆರ , ಮೋಹನ್ ಶೆಟ್ಟಿ, ಅವಿನಾಶ್ ಶೆಟ್ಟಿ, ವಾಣಿ ಯ ಸಮಗೊಂಡ, ರಶ್ಮಿ ಆಚಾರಿಯ, ಯಮುನಾ ಬಿ ಸಾಲಿಯಾನ್, ಶುಭ ಸುವರ್ಣ, ಹಾಗು ಮಹಿಳಾ ವಿಭಾಗದ ಎಲ್ಲ ಸದಸ್ಯರು ಮತ್ತು ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷೀ ಹರೀಶ್ ಕೆ ಚೇವಾರ್, ವೀಣಾ ದೀಪಕ್ ಸುವರ್ಣ, ಕೌಶಿಕ್ ಸರಪಾಡಿ, ಹಾಗು ಉಪ ಸಮಿತಿಯ ಸದಸ್ಯರು ಉಪಸ್ಥಿತರಿದು ಮಹಾಸಭೆ ಯಶಸ್ವಿ ಯಾಗಿ ನಡೆಯಲು ಸಹಕರಿಸಿದರು.

ಪ್ರಾರಂಭದಲ್ಲಿ ಬಳಗದ ಆರಾಧ್ಯ ದೇವಿ ಶ್ರೀ ಶಾರದಾ ಮಾತೆಗೆ ದೀಪ ಪ್ರಜ್ವಲನೇ ಹಾಗು ಮಹಿಳಾ ಸದಸ್ಯರ ಪ್ರಾರ್ಥನೆಯೊಂದಿಗೆ ಮಹಾಸಭೆಯನ್ನು ಪ್ರಾರಂಭಿಸಲಾಯಿತು. ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಂ. ಕೋಟ್ಯಾನ್ ನೆರೆದಿರುವ ಸದಸ್ಯ ಬಾಂಧವರನ್ನು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ವಾಣಿ ಯಂ ಸಮಗೊಂಡ ಅಧ್ಯಕ್ಷgನ್ನು ಸಭೆಗೆ ಪರಿಚಯ ಮಾಡಿದರು. ಉಪಾಧ್ಯಕ್ಷರಾದ  ಅವಿನಾಶ್ ಶೆಟ್ಟಿಯವರು ಧನ್ಯವಾದ ಸಮರ್ಪಣೆ ಮಾಡಿದರು.