ಪಡುವಣ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇಂದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಕಂಡು ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಟ್ಟಾಗಬೇಕಾದ ಅಗತ್ಯದ ಬಗೆಗೆ ಹೇಳಿದರು.
ಆಮೇಲೆ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು ನನ್ನ ಫೋನ್ ಪೆಗಾಸಸ್ ಕಳ್ಳಗಿವಿ ದಾಳಿಗೊಳಗಾಗಿದೆ. ಪ್ರತಿಪಕ್ಷಗಳು ನ್ಯಾಯಾ ಪಡೆಯಲು ಇದರ ವಿರುದ್ಧ ಜಂಟಿ ಸಮರ ಸಾರಲಿವೆ. ನನ್ನ ಸೋದರಳಿಯನ ಫೋನ್ ಕದ್ದಾಲಿಸಿದ್ದು ಈಗಾಗಲೇ ಫೊರೆನ್ಸಿಕ್ ಸ್ಕ್ಯಾನ್ ಮೂಲಕ ಸ್ಪಷ್ಟವಾಗಿದೆ ಎಂದೂ ಅವರು ತಿಳಿಸಿದರು.