ಮೂಡುಬಿದಿರೆ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‍ನ ಹೆಮ್ಮೆಯ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ ಪೂಜಾರಿಯನ್ನು ಒಳಗೊಂಡ ಭಾರತೀಯ ಮಹಿಳಾ ರಾಷ್ಟ್ರೀಯ ತಂಡವು ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ದ್ವಿತೀಯ ಮಹಿಳಾ ಕಬಡ್ಡಿ ವಿಶ್ವಕಪ್-2025ರಲ್ಲಿ ಅಪ್ರತಿಮ ಪ್ರದರ್ಶನ ಮೂಲಕ ಕಿರೀಟ ಮುಡಿಗೇರಿಸಿಕೊಂಡು ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಿಸಿದೆ.

ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 35–28 ಅಂಕಗಳಿಂದ ಸೋಲಿಸಿದ ಭಾರತ ಮಹಿಳಾ ತಂಡವು ಜಾಗತಿಕ ಕಬಡ್ಡಿ ಚಾಂಪಿಯನ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.

ದಕ್ಷಿಣ ಭಾರತದ ಏಕೈಕ ಆಟಗಾರ್ತಿ ಧನಲಕ್ಷ್ಮಿ, ದಕ್ಷಿಣ ಭಾರತದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಏಕೈಕ ಆಟಗಾರ್ತಿ ಎಂಬ ಹಿರಿಮೆಯೊಂದಿಗೆ, ತನ್ನ ಆಲ್‍ರೌಂಡರ್ ಆಟದಿಂದ ತಂಡದಲ್ಲಿ ಬಹುಬೇಡಿಕೆಯ ಕ್ರೀಡಾಪಟುವಾಗಿ ಮೂಡಿಬಂದರು. ಇವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನz ಸಂಪೂರ್ಣ ಕ್ರೀಡಾ ದತ್ತು ಶಿಕ್ಷಣ ಯೋಜನೆಯಲ್ಲಿ ಉಚಿತವಾಗಿ ತಮ್ಮ ಶಿಕ್ಷಣವನ್ನು ಪೂರೈಸಿದ್ದರು. ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ದಕ್ಷಿಣಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ಸಹಕಾರ ಸ್ಮರಿಸಲಾಗಿದೆ.
ಆಳ್ವಾಸ್‍ನ ಕ್ರೀಡಾ ದತ್ತು ಶಿಕ್ಷಣ ಕ್ರಮ ಗ್ರಾಮೀಣ ಪ್ರತಿಭೆಯನ್ನು ಜಾಗತಿಕ ಮಟ್ಟದ ಚಾಂಪಿಯನ್‍ಗಳಾಗಿ ರೂಪಿಸುವ ವೇದಿಕೆಯೆಂದು ಮತ್ತೊಮ್ಮೆ ಜಗತ್ತಿನ ಮುಂದೆ ನಿರೂಪಿಸಿದೆ. ಧನಲಕ್ಷ್ಮಿಯಂತಹ ವಿದ್ಯಾರ್ಥಿಗಳು ವಿಶ್ವ ವೇದಿಕೆಯಲ್ಲಿ ಭಾರತಕ್ಕೆ ಕೀರ್ತಿ ತಂದುಕೊಡುತ್ತಿರುವುದು ನಮ್ಮ ಸಂಸ್ಥೆಗೆ ಅಪೂರ್ವ ಗೌರವ ಎಂದು ಡಾ ಎಂ ಮೋಹನ್ ಆಳ್ವ ಹೇಳಿದರು.