ಮಂಗಳೂರು: ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ಸಂಸ್ಥಾಪನ ದಿನದ ಅಂಗವಾಗಿ ದ.ಕ ಜಿಲ್ಲಾ ಹಾಗೂ ಮಂಗಳೂರು ದಕ್ಷಿಣ ಎನ್ ಎಸ್ ಯು ಐ ಘಟಕದ ವತಿಯಿಂದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಮಂಗಳವಾರ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಈ ವೇಳೆ ದ.ಕ ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಸವಾದ್ ಸುಳ್ಯ ಹಾಗೂ ಮಂಗಳೂರು ದಕ್ಷಿಣ ಎನ್ ಎಸ್ ಯು ಐ ಘಟಕಾಧ್ಯಕ್ಷ ಶೌನಕ್ ರೈ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಗಣೇಶ್ ಪೂಜಾರಿ, ಜಿಲ್ಲಾ ಸೇವಾದಳ ಮುಖಂಡ ಉದಯ್ ಕುಂದರ್, ಯುವ ಕಾಂಗ್ರೆಸ್ ಮುಖಂಡ ಅನ್ಸಾರುದ್ದೀನ್ ಸಾಲ್ಮರ, ಕ್ರಸ್ಟರ್, ಪ್ರಜ್ವಲ್, ಅಯಾಝ್, ಹರ್ಷಿತ್, ಗ್ಲಾನಲ್, ಹರ್ಷಿತ್ ಗೌಡ, ಜೋಶ್ವ, ಆ್ಯರನ್, ಆ್ಯಲ್ಡನ್, ಕೆವಿನ್ ಮತ್ತಿತರರು ಉಪಸ್ಥಿತರಿದ್ದರು.