
ಬೆಳಿಗ್ಗೆ ಓಡುವವರು, ಆಡುವವರು ಜೊತೆಗೆ ಕೂಡುವವರು ಹಾಗೂ ನೋಡುವವರಿಂದ ತುಂಬಿರುತ್ತಿದ್ದ ಮಂಗಳೂರು ಕೇಂದ್ರ ಮೈದಾನ ಈಗ ಬಿಕೋ ಎನ್ನುತ್ತಿದೆ.
ಬೇಗ ಬಾ, ಆಡು ಬಾ, ಓಡು ಬಾ, ನೋಡು ಬಾ ಎಂದು ಕರೆಯುತ್ತಿದೆ. ಕರೆದರೂ ಕೇಳದೆ ಎಂದರೂ ಸದಾ ಚಟುವಟಿಕೆಗಳ ಕೇಂದ್ರವಾದ ನೆಹರೂ ಮೈದಾನ ಅಲಿಯಾಸ್ ಕೇಂದ್ರ ಮೈದಾನದಲ್ಲಿ ಜನ ಇಲ್ಲ. ಆಗೊಮ್ಮೆ ಈಗೊಮ್ಮೆ ಯಾರೋ ಹಾದು ಹೋದರೆ ಉಂಟು ಅಷ್ಟೆ.