ಎರಡನೆಯ ನೋವೆಲ್ ಕೋವಿಡ್19 ಅಲೆಯಲ್ಲಿ ಆಗ್ನೇಯ ಏಶಿಯಾದಲ್ಲಿ ಆದ ಕೊರೋನಾ ಸಾವಿನಲ್ಲಿ ‌ಭಾರತದ ಪಾಲು 93% ಇದೆ.

ಹಾಗೆಯೇ ಕೊರೋನಾ ‌ಸೋಂಕು ತಗುಲಿದವರ ಒಟ್ಟು ಸಂಖ್ಯೆಯಲ್ಲಿ ಆಗ್ನೇಯ ಏಶಿಯಾದಲ್ಲಿ ಭಾರತದ ಪಾಲು 95% ಇದೆ ಎನ್ನುವುದು ಆತಂಕಕಾರಿ ಸಂಗತಿಯಾಗಿದೆ.

ಬುಧವಾರದ ಭಾರತದ ಕೋವಿಡ್ ಸೋಂಕು ಮತ್ತು ಸಾವು ಜಾಗತಿಕವಾಗಿ ಕ್ರಮವಾಗಿ 50% ಮತ್ತು 30% ಇದೆ. ಭಾರತದ ಒಟ್ಟು ಸೋಂಕಿತರ ಸಂಖ್ಯೆಯು 2,37,03,665 ಆಗಿದೆ. ಹಾಗೆಯೇ ‌ದೇಶದಲ್ಲಿ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆಯು 2,58,351 ಆಗಿದೆ.