ಮಂಗಳೂರಿನಲ್ಲಿ ಬೀದಿ ಬದಿಯ ಹಸಿದವರಿಗೆ ಊಟ ಕೊಡುವವರಿದ್ದಾರೆ. ಅದರಲ್ಲೂ ಕ್ರಿಶ್ಚಿಯನ್ ಕುಟುಂಬವೊಂದು ಸದಾ ಇದರಲ್ಲಿ ತೊಡಗಿಕೊಂಡಿದೆ.

ಈಗೆಲ್ಲ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಮೈದಾನದ ಬದಿಯ ಕಾಲುಹಾದಿಯತ್ತ ಕಣ್ಣು ಹಾಯಿಸಿದರೆ ಅಲ್ಲಿ ನೂರಾರು ಜನ ಸಾಲಿನಲ್ಲಿ ನಿಂತಿರುತ್ತಾರೆ. ಸಾಮಾಜಿಕ ಅಂತರ ಇಲ್ಲ, ಹಸಿದವನು ಸಾಮಾಜಿಕ ಅಂತರ ಎಂದರೆ ಉಪವಾಸ ಸಮಾಜದ ಅಣಕ.

ಎಂಟು ದಾಟುತ್ತಲೆ ಆಹಾರ ತರುವ ಈ ಮಹಿಳೆಯರು ಕಾದಿರುವವರಿಗೆ ಸಾಲಾಗಿ ಹಂಚುತ್ತಾರೆ. ಮಧ್ಯಾಹ್ನ, ರಾತ್ರಿ ಕೂಡ ಇವರ ಆಹಾರ ಸೇವೆ ಇದೆಯೆಂದು ಹೇಳಲಾಗಿದೆ.