ಮಿನಿ ವಿಧಾನ ಸೌಧದಿಂದ ಮುಂದಕ್ಕೆ ಉದ್ದಕ್ಕೂ ಮಂಗಳೂರಿನಲ್ಲಿ ಸರಕಾರಿ ಕಚೇರಿಗಳ ಸಾಲು. ಅದರೆದುರಿನ ಕಾಲು ಹಾದಿಯುದ್ದಕ್ಕೂ ಹಿಂದೆ ಎಡಬಿಡದೆ ಬಸ್ ಭರಾಟೆ,‌ಇಂದು ಕಾಲುಗಳಿಲ್ಲದೆ ಕಾಲಿ.

ಇಂದು ಈ‌ ಫುಟ್‌ಪಾತ್ ಹೊಸತಾಗಿಸಲಾಗಿದೆ. ಬಸ್ ಶೆಲ್ಟರ್‌ಗಳು ಮಾಡಿಗೆ ಕಾದಿವೆ. ಆದರೆ ಸಿಟಿ ಬಸ್ಸುಗಳು, ದೂರದೂರಿನ ಬಸ್ಸುಗಳು ಯಾವುದೂ ಬರುವುದಿಲ್ಲ. ಬರುವುದಿಲ್ಲ ಎಂದ ಮೇಲೆ ಇಲ್ಲಿ ನಿಲ್ಲುವ ಪ್ರಶ್ನೆ ಇಲ್ಲ. ಹಾಗಾಗಿ ಜನರೂ ಇಲ್ಲ. ಬಸ್ ಬರ, ಜನ ಬಾರ ಹಾಗಾಗಿ ಹೊಸ ಕಾಲುಹಾದಿ ಎಂದು‌ ಎನಗೆ ಜನ ಸಂದಣಿಯ ಆನಂದ ಎನ್ನುತ್ತ ಕಾದು ಕುಳಿತಿದೆ ಶಬರಿಯಂತೆ. ರಾಮ ಬಾರದಿದ್ದರೆ ಹೋಗಲಿ, ರಾಮ ನಾಮದವರಾದರೂ ಬೇಗ ಬರಲಿ.