ಕೋವಿಡ್ ಕಾರಣ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಸಹಿತದ ಕರಾವಳಿಯಲ್ಲಿ ಸಾಮೂಹಿಕ ಪ್ರಾರ್ಥನೆಯ ಬದಲು ಮನೆಗಳಲ್ಲಿಯೇ ಈದ್ ಉಲ್ ಪಿತ್ರ್ ಸಂಪ್ರದಾಯ ನಡೆಯಿತು.

ನಿನ್ನೆಯೇ ಧರ್ಮ ಗುರುಗಳು ಸರಳ ಹಬ್ಬದ ಆಚರಣೆಗೆ ಹಾಗೂ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತೆ ಕೋರಿದ್ದರು. ಅದರಂತೆಯೇ ಎಲ್ಲೂ ಸಾಮೂಹಿಕ ಮಿಲನ, ತಬ್ಬಿ ಶುಭ ಹಾರೈಸುವುದು ಕಂಡು ಬರಲಿಲ್ಲ. ಹೊಸ ಉಡುಗೆಯ ಭರಾಟೆಯೂ ಕಡಿಮೆ ಇತ್ತು.