ಕೋವಿಶೀಲ್ಡ್ ಎರಡನೆಯ ಡೋಸ್ ಲಸಿಕೆ ಪಡೆಯಲು 12 ರಿಂದ 16 ವಾರಗಳ ಅಂತರವಿರಲಿ ಎಂದು ಸರಕಾರದ ಎನ್‌ಟಿಎಜಿಐ ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆ ಪಡೆಯಲು ಹಳೆಯ ಅಂತರ ಹೆಚ್ಚಿಸಲು ಸಮಿತಿ ಸೂಚಿಸಿಲ್ಲ.
ಗರ್ಭಿಣಿ ಮಹಿಳೆಯರು ಲಸಿಕೆ ಪಡೆಯುವುದು ಅವರ ಆಯ್ಕೆ ಹಾಗೂ ಅವರ ವೈದ್ಯರ ಸಲಹೆಯ ಮೇರೆಗೆ ನಡೆಯಬೇಕು. ಈಗಾಗಲೇ ಕೊರೋನಾ ಸೋಂಕು ತಗುಲಿದವರು ಗುಣವಾದ ಆರು ತಿಂಗಳ ಬಳಿಕವೇ ಲಸಿಕೆ ಪಡೆಯಬೇಕು ಎಂದು ಕೂಡ ಎನ್‌ಟಿಎಜಿಐ ಹೇಳಿದೆ.