ಕಾರ್ಕಳ: ನೂತನ ತಂತ್ರಜ್ಞಾನದ ನವೀಕ್ರತ ಎಟಿಎಂ ಸಾಣೂರಿನ ಗ್ರಾಮೀಣ ಭಾಗದ ಬ್ಯಾಂಕ್ ಆಫ್ ಬರೋಡ ಶಾಖೆಗೆ ಜೋಡಣೆಯಾಗಿರುವುದು ಗ್ರಾಹಕರಿಗೆ ವರದಾನವಾಗಿದೆ ಎಂದು ಕೆಎಂಎಫ್ ಮಂಗಳೂರಿನ ನಿರ್ದೇಶಕ ಹಾಗೂ ಸಾಣೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ, ಉದ್ಯಮಿ ಸಾಣೂರು ನರಸಿಂಹ ಕಾಮತ್ ರವರು ತಿಳಿಸಿದರು.
ಏಪ್ರಿಲ್ 6, ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಮುರತಂಗಡಿ ಪರಿಸರದಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಯ " ನೂತನ ನವೀಕೃತ ಹೊಸ ತಂತ್ರಜ್ಞಾನದ ಎಟಿಎಂ " ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಣೂರು ಮುರತಂಗಡಿ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ವೇಗವಾಗಿ ನಡೆಯುತ್ತಿದ್ದು, ಸದ್ಯದಲ್ಲಿಯೇ ಸುವ್ಯವಸ್ಥಿತ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ, ಸರ್ವಿಸ್ ರೋಡ್ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದ್ದು, ಪರಿಸರದಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ ಆರ್ಥಿಕ ಚಟುವಟಿಕೆಗಳು ಗರಿಕೆದರಲಿದ್ದು, ಬ್ಯಾಂಕ್ ಗ್ರಾಹಕರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಶುಭ ಹಾರೈಸಿದರು.
ನೂತನ ನವೀಕೃತ ಎಟಿಎಂ ಗ್ರಾಹಕರಿಗೆ ಹೊಸ ತಂತ್ರಜ್ಞಾನದ ಸ್ಪರ್ಶದ ಜೊತೆಗೆ ವೇಗದ ಹೊಸ ಬ್ಯಾಂಕಿಂಗ್ ಅನುಭವವನ್ನು ನೀಡಲಿದೆ ಎಂದು ಸಾಣೂರು ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಪ್ರಮೋದ್ ಕಾಮತ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಕೆಎಂಎಫ್ ನಂದಿನಿ ಆಡಳಿತ ನಿರ್ದೇಶಕರಾದ ಅಶೋಕ್ ರವರು ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು. ಬ್ಯಾಂಕಿನ ಗ್ರಾಹಕರಾದ ಇರುವತ್ತೂರಿನ ಪ್ರಗತಿಪರ ಕೃಷಿಕರಾದ ಚಂದ್ರರಾಜ ಅಧಿಕಾರಿಯವರು ನೂತನ ಎಟಿಎಂನಲ್ಲಿ ಪ್ರಥಮ ವಹಿವಾಟನ್ನು ನಡೆಸಿ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಬ್ಯಾಂಕಿನ ಸಾಣೂರು ಶಾಖೆಯ ಉಪ ವ್ಯವಸ್ಥಾಪಕರಾದ ಹರಿಶ್ಚಂದ್ರ ನಾಯ್ಕ, ಸಿಬಂಧಿಗಳಾದ ಸದಾಶಿವ ಶೆಟ್ಟಿ, ಜಗದೀಶ್ ನಾಯ್ಕ, ಹಿರಿಯ ಗ್ರಾಹಕರಾದ ರಮನಾಥ ಶೆಣೈ ,ಮತ್ತಿತರರು ಉಪಸ್ಥಿತರಿದ್ದರು.