ಮಧ್ಯ ರಶಿಯಾದ ಟಾಟರ್ಸಾನ್   ಪ್ರಾಂತ್ಯದ ಕಜಾನ್‌ ನಗರದ 175ನೇ ಸಂಖ್ಯೆಯ ಹೈಸ್ಕೂಲಿನಲ್ಲಿ ಇಂದು ಮಧ್ಯಾಹ್ನ ‌ಈ ದುರಂತ ಸಂಭವಿಸಿದೆ.

Representational Image

ಗುಂಡಿನ ದಾಳಿಯಲ್ಲಿ ಒಬ್ಬರು ಶಿಕ್ಷಕರು ಮತ್ತು ಎಂಟು ವಿದ್ಯಾರ್ಥಿಗಳು ಮೃತರಾದರು. ಪೋಲೀಸರು ಸುತ್ತುವರಿದು 17ರ ಪ್ರಾಯದ ಒಬ್ಬ‌ ದಾಳಿಕೋರನನ್ನು ಬಂಧಿಸಿದರು.

ಒಬ್ಬನು ತಪ್ಪಿಸಿಕೊಂಡನಾದರೂ‌ ಶಾಲೆಯ ಒಳಗೇ ಇದ್ದಾನೆ. ಅವನು ನಾಲ್ಕನೆಯ ‌ಮಹಡಿಗೆ ಏರಿದ್ದರಿಂದ ಅಲ್ಲಿಗಿರುವ ಎಲ್ಲ ಬಾಗಿಲುಗಳನ್ನು ಮುಚ್ಚಿ ‌ಪೋಲೀಸರು ಸುತ್ತು ‌ಮುತ್ತಿದ್ದಾರೆ. ಶರಣಾಗದಿದ್ದರೆ ದಾಳಿಕೋರನನ್ನು ಮಂಗಳವಾರ ರಾತ್ರಿಯೊಳಗೆ ಗುಂಡಿಟ್ಟು ಕೊಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.