ಮಂಗಳೂರು, ಮೇ 11: ಮಾಜಿ ವಿಧಾನ ಪರಿಷತ್ ಶಾಸಕ ಮತ್ತು ಎಐಸಿಸಿ ಕಾರ್ಯದಶಿರಾದ ಐವನ್ ಡಿ ಸೋಜರವರ ನೇತೃತ್ವದಲ್ಲಿ ಇಂದು ಜಪ್ಪಿನಮೊಗರು, ತಂದೊಳಿಗೆ, ಆಡಂ ಕುದ್ರು, ಮನ್ನಗುಡ್ಡ ಪ್ರದೇಶದ ವಿವಿಧ ಕಾಲೊನಿಗಳಿಗೆ ತೆರಳಿ, ನರಗೋಗ, ಕ್ಯಾನ್ಸರ್ ಮತ್ತಿತ್ತರ ರೋಗಗಳಲ್ಲಿ ಬಳಲುತ್ತಿರುವ ಮನೆಗಳಿಗೆ ತೆರಳಿ, ಕಿಟ್ಟುಗಳನ್ನು ಹಸ್ತಾಂತರಿಸುವ ಮೂಲಕ ಅವರ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಿ, ಅಂಗವಿಕರಲರಿಗೆ ಮತ್ತು ಇನ್ನಿತರ ರೋಗಗಳಿಂದ ಬಳಲುವವರಿಗೆ ಸೂಕ್ತ ಜೌಷದಿಯನ್ನು ತೆಗೆದುಕೊಳ್ಳುವ ಬಗ್ಗೆ ಸಲಹೆ ನೀಡಲಾಯಿತು. ಅನೇಕರು ಬಡತನ ರೇಖೆಗಿಂತ ಕಡಿಮೆಯಿರುವವರಿಗೆ ಸರಕಾರದಿಂದ ಕೂಡಲೇ ಅಕ್ಕಿ ಮತ್ತು ದಿನಸಿಗಳನ್ನು ವಿತರಿಸುವ ಮೂಲಕ ಜೌಷಧ ಪಡೆಯಲು, ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಜೌಷದಿಗಳನ್ನು ನೀಡಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಐವನ್ ಡಿ ಸೋಜರವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಗಳಾದ ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಪಕ್ಷದ ನಾಯಕರುಗಳಾದ ವಿವೇಕ್ ರಾಜ್ ಪೂಜಾರಿ, ಯೂಸೂಫ್ ಉಚ್ಚಿಲ್, ಅಬಿಬುಲ್ಲ, ಸುರೇಶ್ ಶೆಟ್ಟಿ, ಅನಿಲ್ ಕುಮಾರ್, ಸುನಿತಾ ಶೆಟ್ಟಿ, ಮಂಜುಳಾ ನಾಯಕ್, ಸಮರ್ಥ್ ಭಟ್, ನಿರಂಜನ್ ಮುಂತಾದವರು ಉಪಸ್ಥಿತರಿದ್ದರು.