ಇಂಥ ಮಾರಕ ಕಾಯಿಲೆ ಕಾಡುತ್ತಿರುವಾಗ ಉಪಯೋಗವಿಲ್ಲದ ಆಯುಷ್ಮಾನ್ ಯೋಜನೆ ಯಾವ ಪುರುಷಾರ್ಥಕ್ಕೆ ಎಂದು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಆಂಧ್ರ, ತೆಲಂಗಾಣ ಸರಕಾರಗಳು ತಮ್ಮ ವೆಚ್ಚದಲ್ಲಿ ಕೋವಿಡ್‌ಗೆ ಚಿಕಿತ್ಸೆ ನೀಡುವಾಗ ನಿಮಗೇಕೆ ಸಾಧ್ಯವಿಲ್ಲ? ಪ್ರಧಾನ ಮಂತ್ರಿ ಮೋದಿಯವರು ಆಯುಷ್ಮಾನ್ ಭಾಷಣ ಬಿಗಿದರೆ ಸಾಕೆ, ಸೂಕ್ತ ‌ಸಮಯದಲ್ಲಿ ಅದು ಉಪಯೋಗಕ್ಕೆ ಬರಬೇಡವೆ? ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೂಡಲೆ ಕೊರೋನಾ ಬಾಧಿತರಿಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಇಲ್ಲವೇ ಕನಿಷ್ಟ ವೆಚ್ಚದ ಚಿಕಿತ್ಸೆ ಸಿಗುವಂತೆ ಮಾಡಲಿ‌ ಎಂದು ಕುಮಾರಸ್ವಾಮಿ ಹೇಳಿದರು.