ಮಾನವ ಸಂಘಜೀವಿ ಅವನು ಸುತ್ತಲಿನವರೊಡನೆ ಒಂದಾಲ್ಲ ಒಂದು ವಿಷಯಕ್ಕೆ ಅವಲಂಬಿತನಾಗಿರುತ್ತಾನೆ. ಹುಟ್ಟಿನಿಂದ ಸಾವಿನವರೆಗೂ ಅನೇಕ ಸಂಬಂಧಗಳ ಬಂಧನಗಳಲ್ಲಿ ಬದುಕುತ್ತಾನೆ. ಸಂಬಂಧಗಳು ಭಾವತ್ಮಕ ಮತ್ತು ಮಾನಸಿಕ ಯೋಗಕ್ಷೇಮದ ಅಡಿಪಾಯ. ಹಿಂದಿನ ಕಾಲದಲ್ಲಿ ಮನುಷ್ಯ ಅವಿಭಕ್ತ ಕುಟುಂಬದೊಂದಿಗೆ ಜೀವಿಸುತ್ತಾ ಇದ್ದ ಪ್ರಾಶ್ಚತ್ಯ ಪ್ರಭಾವದಿಂದ ವಿಭಕ್ತ ಕುಟುಂಬಗಳಾಗಿ ಇವಾಗ ಅಂತೂ ಒಂಟಿ ಸಲಗನಾಗೇ ಜೀವಿಸುವವರು ಇದ್ದಾರೆ.ಸಂಬಂಧಗಳು ಅದರ ಸತ್ವವನ್ನ ಕಳೆದುಕೊಳ್ಳುತ್ತಾ ಬಂದಿದೆ
ಒಂದು ಕುಟುಂಬ ಅಂದರೆ ಅಲ್ಲಿ ಅದೆಷ್ಟೋ ಸಂಬಂಧಗಳು ಇರುತ್ತಿದ್ದವು ದೊಡ್ಡಪ್ಪ ದೊಡ್ಡಮ್ಮ ಚಿಕ್ಕಪ್ಪ ಚಿಕ್ಕಮ್ಮ ಅಜ್ಜಿ ಅಜ್ಜ ಅತ್ತೆ ಮಾವ ಮೈದುನ ನಾದಿನಿ ಅಣ್ಣ ಅತ್ತಿಗೆ ಎಲ್ಲಾರೂ ಒಟ್ಟಾಗಿ ಜೀವಿಸುತ್ತಿದ್ದರು. ಈಗೀನವರಿಗೆ ಅಪ್ಪ ಅಮ್ಮನ ಜೊತೆಗೆ ಇರೋದು ಕಷ್ಟ ಗಂಡ ಹೆಂಡತಿ ಮಕ್ಕಳ ಜೊತೆಗೆ ಇರೋದು ಕಷ್ಟನೇ.ಅದಕ್ಕೆ ವೃದ್ಧಾಶ್ರಮ ಅನಾಥ ಆಶ್ರಮಗಳು ಹೆಚ್ಚಾಗುತ್ತಾ ಬಂದಿದೆ. ಹಾಗೇಯ ಡೈರ್ವಸ್ ಕೇಸಗಳು ಹೆಚ್ಚಾಗುತ್ತಿದೆ. ಹತ್ತು ವರ್ಷಗಳಿಂದ ಪ್ರೀತಿಸಿ ಮದುವೆಯಾದವರು ಡೈರ್ವಸ್ ಪಡೆಯುತ್ತಿರುವುದು ಮನುಷ್ಯನಿಗೆ ಸಂಬಂಧಗಳು ಬೋರ್ ಆಗುತ್ತಿರುವುದರ ಸಂಕೇತವೇ.
ಪ್ರೇಮಿಗಳ ಮಧ್ಯೆ ಆಗಲಿ ಸ್ನೇಹಿತರ ಮಧ್ಯೆ ಆಗಲಿ ಗಂಡ ಹೆಂಡತಿಯರ ಮಧ್ಯೆ ಆಗಲಿ ಯಾವುದೇ ಸಂಬಂಧ ಚೆನ್ನಾಗಿರಬೇಕು ಎಂದರೆ ಇಬ್ಬರಲ್ಲೂ ನಂಬಿಕೆ ಇರಬೇಕು ಇಬ್ಬರಿಗೂ ಸಂಬಂಧದ ತುಡಿತ ಇರಬೇಕು. ಮನುಷ್ಯ ತುಂಬಾ ಸ್ವಾರ್ಥಿಯಾಗಿ ಹಣದಿಂದ ಹೋಗತ್ತಾ ಇರೋದಕ್ಕೆ ಮನುಷ್ಯನ ನಡುವೆ ಅಷ್ಟೇ ಅಲ್ಲದೇ ಪ್ರಕೃತಿಯ ನಡುವಿನ ಸಂಬಂಧವನ್ನು ಕಳೆದುಕೊಳ್ಳುತ್ತಾನೆ. ಜೀವನದಲ್ಲಿ ಯಶಸ್ವಿಯಾಗ ಬಯಸುವ ಮನುಷ್ಯನ ಸಂಬಂಧದಲ್ಲಿ ಯಾಕೆ ಯಶಸ್ವಿಯಾಗದೇ ನಾನಾ ಕಾರಣಗಳಿಂದ ದೂರ ಹೋಗುತ್ತಿದ್ದಾನೇ. ಶಿವ-ಪಾರ್ವತಿಯರ ದಾಂಪತ್ಯ ಜೀವನವು ನಿಜವಾದ ಪ್ರೀತಿಯ ಸಂಕೇತವಾಗಿದೆ. ಅವರ ಸಂಬಂಧದಲ್ಲಿ ಪ್ರೀತಿ, ಗೌರವ ಮತ್ತು ಸಮರ್ಪಣೆಯ ಭಾವನೆ ಯಾವಾಗಲೂ ಉಳಿದಿತ್ತು. ಇದು ಸಂತೋಷದ ದಾಂಪತ್ಯ ಜೀವನಕ್ಕೆ ಸಾದಾಕಾಲ ಮಾದರಿ.
ಎರೆಡು ಮನುಸ್ಸುಗಳನ್ನ ಬಲವಂತದಿಂದ ಕಟ್ಟಿ ಹಾಕುವುದು ಕಷ್ಟವೇ. ಆದರೆ ಸಂಬಂಧಗಳನ್ನ ನಿಭಾಯಿಸುವುದು ಸಾಧನೆಯೇ ಇಬ್ಬರೂ ಪ್ರಾಮುಖ್ಯತೆಯ ಕೊಟ್ಟರೇ ಪರಸ್ಪರ ಇಷ್ಟ ಆಗೋದನ್ನ ತಿಳಿದುಕೊಂಡರೆ ಇಬ್ಬರ ನಡುವೆ attachment ಬೆಳೆಯುತ್ತಾನೆ ತುಂಬಾ ಮುಖ್ಯವಾಗಿ ಸಂಬಂಧಗಳಲ್ಲಿ ಪರಸ್ಪರ ಗೌರವ ಕೊಡೋದನ್ನ ಕಲಿತರೆ ಸಂಬಂಧಗಳಲ್ಲಿ ಹೊಸತನ ಮೂಡುತ್ತದೆ. ಗೌರವ ಕೊಡುವ ಸಂಬಂಧಗಳು ಎಂದಿಗೂ ಬೋರ್ ಆಗಲು ಸಾಧ್ಯವೇ ಇಲ್ಲಾ.ಸಂಬಂಧಗಳು ಚೆನ್ನಾಗಿ ಇರೋವುದು ಮನುಷ್ಯನ ಮನಸ್ಸಿನಿಂದಾನೇ.
ರೇಷ್ಮಾ