ಚಂದನದ ಬೊಟ್ಟು ರೇಷ್ಮೆಯ ದಾರ ಪ್ರಕೃತಿಯ ಸುಗಂಧ ಮಳೆಯ ವಾಸನೆ ಅಣ್ಣನ ಭರವಸೆ ತಂಗಿಯ ಪ್ರೀತಿ ಬರ್ತಾ ಇದೆ ಸಹೋದರ ಸಹೋದರಿಯ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬ ರಕ್ಷಾಬಂಧನ

ಅಣ್ಣ ಎಂದರೆ ಅವಳಿಗೆ ಜೀವ. ಅವನಿಗೂ ಅಷ್ಟೇ ತಂಗಿ ಎಂದರೆ ತನ್ನದೇ ಒಂದು ಭಾಗವಿದ್ದಂತೆ. ಆ ಸಂಭಂದವೇ ಹಾಗೇ ಅಲ್ಲಿ ಪ್ರೀತಿ, ಕೋಪ, ಜಗಳ, ಒಮ್ಮೊಮ್ಮೆ ಹೊಡೆದಾಟ ಮುನಿಸು ಇದ್ದೆ ಇರುತ್ತದೆ. ಆದ್ರೆ ಇದನೆಲ್ಲ ಮೀರಿದ ಭಾಂದವ್ಯವೊಂದು ಇದೆಯಲ್ಲ ಅದು ಬಣ್ಣಿಸಲು ವರ್ಣಿಸಲು ಅಸಾಧ್ಯ.ಪ್ರತಿ ಅಣ್ಣತಂಗಿಯರಲ್ಲಿನ ಮಧುರ ಭಾವನೆ ಅದು.ಈ ನವಿರಾದ ಭಾವನೆಗಳನ್ನು ಗಟ್ಟಿಗೊಳಿಸುವ ದಿನವೇ ರಕ್ಷಾಬಂಧನ.

ತನ್ನ ಅಣ್ಣತಮ್ಮಂದಿರು ಯಾವಾಗಲು ನಗುತ್ತಾ ಸಂತೋಷದಿಂದ ಇರಬೇಕು ಎಂದು ಸಹೋದರಿ ಆಶಿಸುತ್ತಾಳೆ.ಸಹೋದರಿಗೇ ನೆರಳಾಗಿ ನಿಲ್ಲಬೇಕು ಎಂದು ಸಹೋದರ ಬಯಸುತ್ತಾನೆ.ಶ್ರಾವಣಮಾಸದಲ್ಲಿ ಬರುವ ಈ ಅಣ್ಣ ತಂಗಿಯರ ಹಬ್ಬ ರಕ್ಷಾ ಬಂಧನ ನಿಜವಾಗಿಯೂ ಎಲ್ಲರ ನೆಚ್ಚಿನ ಹಬ್ಬ. ದೇಶದ ಎಲ್ಲಾ ಸಹೋದರ ಸಹೋದರಿಯರು ಈ ದಿನಕ್ಕಾಗಿ ಕಾಯುತ್ತ ಇರುತ್ತಾರೆ.

ತಂಗಿ ಕಟ್ಟುವ ರಾಖಿಗೇ ಕೈಯೋಡ್ಡಿ ಸಂಭ್ರಮಿಸುವ ಅಣ್ಣ. ಮತ್ತೊಂದು ಕಡೆ ದೂರದಲ್ಲಿನ ತಂಗಿ ಕಳಿಸುವ ರಾಖಿಯ ದಾರಿ ನೋಡುವ ಹಂಬಲಿಸುವ ಅಣ್ಣ ಇನ್ನೊಂದು ಕಡೆ ಅಣ್ಣನಿಗೆ ರಾಖಿಯನ್ನು ಕಟ್ಟಿ ಸಂತಸದ ಕ್ಷಣಗಳನ್ನು ಕಣ್ತುಂಬಿ ಸಂಭ್ರಮಿಸಿ ಅಣ್ಣನ ಉಡುಗೊರೆಯನ್ನು ಪಡೆಯುವ ತಂಗಿ ಎಂತಹ ಅದ್ಬುತ ಕ್ಷಣ ಅದು.ಈ ಹಬ್ಬಕ್ಕೆ ತಂಗಿ ತವರಿಗೆ ಬಂದು ತನ್ನ ಸಹೋದರರರಿಗೆ ರಾಖಿ ಕಟ್ಟಿ ಸಂಭ್ರಮಿಸುವ ದಿನ ಈ ರಕ್ಷಾಬಂಧನ. ಸಹೋದರಿ ರಾಖಿ ಕಟ್ಟಿ ಸಿಹಿ ತಿನ್ನಿಸಿ ಸಹೋದರನಿಂದ ಉಡುಗೊರೆ ಪಡೆದು ತನ್ನ ಬಾಲ್ಯವನ್ನು ನೆನೆಯುತ್ತ ಆ ದಿನ ಕಳೆಯುತ್ತಾರೆ...

ನಾನು ಸಹ ಪ್ರತಿ ವರ್ಷ ನನ್ನ ತಂಗಿಯ ಬರುವಿಕೆಯನ್ನು ಕಾಯುತ್ತೇನೆ. ಅವಳು ಬರುತ್ತಾಳೆ ಅವಳಿಗೆ ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ ಎಂದರೆ ನಾನೇ ಹೋಗುತ್ತೇನೆ. ಒಂಥರಾ ಈ ರಕ್ಷಾಬಂಧನ ಅನ್ನೋ ದಿನ ವಿಶೇಷವಾದ ದಿನ ತಂಗಿ ನಿಜವಾಗಿಯೂ ಎರಡನೇ ತಾಯಿ ಎಂದರೆ ತಪ್ಪಾಗದು ಅವಳಿಗೆ ಸದಾ ತನ್ನ ತವರಿನ ಚಿಂತೆ ಸಹೋದರರ ಚಿಂತೆ ಸಹೋದರಿ ಯಾವತ್ತೂ ತನ್ನ ಸಹೋದರರ ಬೆಳವಣಿಗೆ ಆಶಿಸುತ್ತಾಳೆ.

ತಂಗಿಗೇ ನಾವು ಏನು ಹೇಳದಿದ್ದರೂ ಸಹ ಹೇಳದೆಯೇ ತನ್ನ ಅಣ್ಣನ ತಮ್ಮನ ಮನಸಿನ ಮಾತನ್ನು ತಿಳಿಯುತ್ತಾಳೆ.ಈ ಶಕ್ತಿ ತಾಯಿ ಮತ್ತು ತಂಗಿಯಲ್ಲಿ ಮಾತ್ರ ನೋಡಲು ಸಿಗುತ್ತದೆ.ತನ್ನ ಸಹೋದರನ ಬಗ್ಗೆ ಅವಳಿಗೆ ಗೊತ್ತಿರೋ ಅಷ್ಟು ಮತ್ತೊಬ್ಬರಿಗೆ ಗೊತ್ತಿರಲು ಸಾಧ್ಯವಿಲ್ಲ. ನಿಜವಾಗಿಯೂ ತಂಗಿ ಇರುವ ಸಹೋದರರು ಪುಣ್ಯವಂತರು.

"ಮಾಂಗಿಥಿ ಮೈನೇ ದುವಾ ರಬ್ ಸೇ ದೇನಾ ಮುಝೆ ಓ ಬೆಹನಾ ಹೊ ಜೊ ಅಲಗ ಸಬ್ ಸೇ ಔರ್ ಭಗವಾನನೇ ಮುಝೆ ಏಕ್ ಪ್ಯಾರಿ ಸಿ ಬೆಹನಾ ದಿಯಾ ಔರ್ ಕಹಾ ನವೀನ ಸಂಭಾಲೋ ಇಸ್ ಬೆಹನಾ ಕೋ ಎ ಅನಮೋಲ್ ಹೈ ಸಬ್ ಸೇ"

ನಾನು ರಕ್ಷಾಬಂಧನ ದಿನದ ಹಾಗೂ ನನ್ನ ತಂಗಿ ಮತ್ತು ತಂಗಿಯ ರಾಖಿಯ ಬರುವಿಕೆಯ ದಾರಿ ಕಾಯುತ್ತಿರುವೆ. ನೀವು ಕಾಯ್ತಾ  ಇದ್ದೀರಾ ತಾನೇ ಎಲ್ಲರಿಗೂ ನನ್ನ ಮನವಿ ನೀವು ವರ್ಷ ಪೂರ್ತಿ ಎಷ್ಟೇ ವ್ಯಸ್ತರಿದ್ದರು. ಈ ದಿನ ಕೇವಲ ನಿಮ್ಮ ಪರಿವಾರಕ್ಕೆ ನಿಮ್ಮ ಸಹೋದರಿಗೇ ಮೀಸಲು ಇಡೀ ಒಂದು ವೇಳೆ ಅವರಿಗೇ ಬರಲು ಆಗಲಿಲ್ಲ ಎಂದಾದರೆ ನೀವೇ ಸ್ವತಃ ಅವರು ಇರುವ ಊರಿಗೆ ಹೋಗಿ ರಾಖಿ ಕಟ್ಟಿಸಿಕೊಳ್ಳಿ ಆ ಕ್ಷಣ ಅವರ ಮುಖದಲ್ಲಿ ಮನಸಲ್ಲಿ ಇರುವ ಕಾಣುವ ಸಂತೋಷ ಕೋಟಿ ಕೊಟ್ಟರು ನೋಡಲು ಸಿಗುವದಿಲ್ಲ.

"ಅಣ್ಣನಿಗೆ ಅಣ್ಣನ ಮತ್ತು  ತಮ್ಮನಿಗೆ ತಮ್ಮನ ಪದವಿ ಸಿಕ್ಕಿರೋದು ತಂಗಿ ಬಂದ ಮೇಲೆಯೇ"

ಎಲ್ಲರಿಗೂ ರಕ್ಷಾಬಂಧನದ ಹಾರ್ಧಿಕ ಶುಭಾಶಯಗಳು