ನಿನ್ನ ಕಣ್ಣಂಚಿನ ತೇವ 

ಒಡಲಾಳದ ನೋವ ಜಗಕೆ 

ಕಂಡಿತಾದರೂ ಹೇಗೆ?


ಸಂಸಾರದ ಸಹಸ್ರ

ಮಂಡೂಕಗಳ ಕರ್ಕಶ

ಕಿರುಚಾಟದ ಮದ್ಯೆ 

   

ನಿರಂತರ ಕಷ್ಟಗಳ 

ಮಳೆಯಲಿ ಮಿಂದು

ನೀ ಅಳುವಾಗ


ಸಂಸಾರ ನೊಗದ 

ಭಾರವ ಸೀರೆಯ 

ಸೆರಗಿನೊಳಗೆ ಸಹಿಸುವಾಗ


ಹೆಪ್ಪುಗಟ್ಟಿದ ಕಣ್ಣಾಲೆಗಳ

ಹಿಂದಿನ ಕತೆಯ 

ನಗುವಿಂದ ಮರೆಮಾಚುವಾಗ


- ಡಾ.ರಾಜಶೇಖರ ನಾಗೂರ

   ಹಿರಿಯ ಪಶುವೈದ್ಯಾಧಿಕಾರಿ, ಹುಬ್ಬಳ್ಳಿ