ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕರ್ನಾಟಕ ಸರಕಾರವು ನಡೆಸಿದ ಭಾರತೀಯ ಸಂವಿಧಾನದ ಪ್ರಿಯಾಂಬ್ಲ್ ಓದುವಿಕೆಯಲ್ಲಿ ಜಗತ್ತಿನಾದ್ಯಂತ ಅಧಿಕೃತವಾಗಿ 2,31,66,401 ಮಂದಿ ಭಾಗವಹಿಸಿದರು ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೀಠಿಕೆ ಪಠಣಕ್ಕೆ ಚಾಲನೆ ನೀಡಿದರು. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮೊದಲಾದವರು ಭಾಗವಹಿಸಿದರು. ಬಳಿಕ ಅಂಬೇಡ್ಕರ್, ಬಾಬು ಜನಜೀವನ ರಾಮ್, ವಾಲ್ಮೀಕಿ ಚಿತ್ರಪಟಗಳಿಗೆ ಗೌರವ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿಗಳು ಮನುಸ್ಮೃತಿಯಿಂದ ದೇಶದಲ್ಲಿ ಗುಲಾಮಗಿರಿಗೆ ಚಾಲನೆ ಸಿಕ್ಕಿತು ಎಂದು ಹೇಳಿದರು.

ಜಗತ್ತಿನ ಹಲವು ಕಡೆ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಈ ಪೀಠಿಕೆ ಓದು ಹಮ್ಮಿಕೊಳ್ಳಲಾಗಿತ್ತು.

ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇದಕ್ಕೆ ಚಾಲನೆ ನೀಡಿದರು. ಅನಂತರ ಮಾತನಾಡಿದ ಅವರು ಸಂವಿಧಾನವೇ ನಮ್ಮ ಪ್ರಜಾಪ್ರಭುತ್ವದ ಅಡಿಪಾಯ ಎಂದು ಹೇಳಿದರು. ಉಡುಪಿಯಲ್ಲಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಚಾಲನೆ ಕೊಟ್ಟರು.