ಕಳೆದ ತಿಂಗಳು ರಾಷ್ಟ್ರೀಯ ಚುನಾವಣಾ ಆಯೋಗವು ಎಲ್ಲ ರಾಜಕೀಯ ಪಕ್ಷಗಳಿಗೂ ನೋಟೀಸು ನೀಡಿ, ಒಂದು ದೇಶ ಒಂದು ಚುನಾವಣೆ ಬಗೆಗೆ ಅಭಿಪ್ರಾಯ ತಿಳಿಸಲು ತಿಳಿಸಿತ್ತು. ಅದಕ್ಕೆ ಉತ್ತರಿಸಿದ ಆಮ್ ಆದ್ಮಿ ಪಕ್ಷವು ಒಂದು ದೇಶ ಒಂದು ಚುನಾವಣೆ ಅಸಾಂವಿಧಾನಿಕ ಮತ್ತು ಜನತಂತ್ರ ವಿರೋಧಿ ಎಂದು ಉತ್ತರ ನೀಡಿದೆ.
Image courtesy
ಈ ಸಂಬಂಧ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಎಪಿ ನಾಯಕಿ ಶಾಸಕಿ ಶ್ರೀಮತಿ ಆಶಿಕಿಯವರು 12 ಪುಟಗಳ ಉತ್ತರ ಕಳುಹಿಸಿರುವುದರ ಬಗೆಗೆ ಮಾಹಿತಿ ನೀಡಿದರು.
13 ನ್ಯಾಯಾಧೀಶರಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠವು ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಸಂಸತ್ತು ಸಂವಿಧಾನ ತಿದ್ದಬಹುದೇ ಹೊರತು ಅದರ ಮೂಲ ಸ್ವರೂಪ ಬದಲಾಯಿಸುವಂತಿಲ್ಲ. ಒಂದು ದೇಶ ಒಂದೇ ಚುನಾವಣೆ ಎಂದರೆ ಸಂವಿಧಾನದ ಆಶಯ ಬುಡಮೇಲು ಆಗುತ್ತದೆ ಎಂದು ಶ್ರೀಮತಿ ಆಶಿಕಿ ಹೇಳಿದರು.
ಜನರು ಆಳುವ ಪಕ್ಷಗಳ ನಾಡಿ ಅರಿಯಲು ದೀರ್ಘ ಕಾಲ ಕಾಯಬೇಕು. ಒಂದು ಸರಕಾರವು ಅವಿಶ್ವಾಸ ನಿರ್ಣಯದಡಿ ಬಿದ್ದರೆ ಆ ರಾಜ್ಯವು ಸರಕಾರವಿಲ್ಲದೆ ಒಂದು ಚುನಾವಣೆವರೆಗೆ ಅಧಿಕಾರಿಗಳ ಕೈಯಲ್ಲಿ ಇರಬೇಕೆ ಎಂದು ಅವರು ಪ್ರಶ್ನಿಸಿದರು.
ಒಂದು ವೇಳೆ ಕೇಂದ್ರ ಇಲ್ಲವೇ ರಾಜ್ಯಗಳಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದಿದ್ದರೆ ರಾಷ್ಟ್ರಪತಿಗಳ ಚುನಾವಣೆ ಮಾದರಿಯಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಿಗಳ ಆಯ್ಕೆ ನಡೆಯಬೇಕು. ಬಿಜೆಪಿ ಖರೀದಿ ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದು ಎಎಪಿ ಪರ ಅಭಿಪ್ರಾಯವನ್ನು ಅವರು ಮುಂದಿಟ್ಟರು.
ಒಂದು ದೇಶ ಒಂದು ಚುನಾವಣೆಯು ಪ್ರಜಾಪ್ರಭುತ್ವ ವಿರೋಧಿ ಎಂದು ಅವರು ಒತ್ತಿ ಹೇಳಿದರು.