24 ವರುಷಗಳಿಂದ ರಾಜ್ಯ ಸಭೆಯಲ್ಲಿ ಇರುವ ಕರಾವಳಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡೀಸ್ ಅವರು ಸೋಮವಾರ ಮಧ್ಯಾಹ್ನದ ಹೊತ್ತಿಗೆ ನಿಧನರಾದರು.

ಕೇಂದ್ರ ಸಚಿವರಾಗಿದ್ದ ಅವರು ಉಡುಪಿಯ ಸಂಸದರಾಗಿಯೂ ಇದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಪ್ರಭಾವ ಬೆಳೆಸಿಕೊಂಡು ಸ್ಥಳೀಯ ರಾಜಕೀಯಕ್ಕಿಂತ ಹೆಚ್ಚಾಗಿ ಅವರು ದೆಹಲಿ ‌ಕೇಂದ್ರಿತ ರಾಜಕೀಯ ಮಾಡುವುದರಲ್ಲಿ ನಿಷ್ಣಾತರಿದ್ದರು.