ರಾಜಕೀಯ, ಜಾತಿ ಇವನ್ನೆಲ್ಲ ರಾಜಕೀಯದಲ್ಲಿ ಬೆರೆಸಬಾರದು. ಎಲ್ಲ ಪಕ್ಷಗಳಲ್ಲಿ ಎಲ್ಲ ಜಾತಿ ಧರ್ಮಗಳವರು ಇದ್ದಾರೆ. ಜಾತಿ ಮಠಾಧೀಶರು ರಾಜಕೀಯಕ್ಕೆ ಇಳಿದಿರುವುದು ಅಪಾಯಕಾರಿ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ದಲಿತ ಮುಖ್ಯಮಂತ್ರಿ ಪದವಿ ಬೇಡಿ ಪಡೆಯುವುದಲ್ಲ. ಅದು ಸಮಯ ಸನ್ನಿವೇಶ ಅನುಸರಿಸಿ ಇರುತ್ತದೆ ಎಂದು ಅವರು ಹೇಳಿದರು.