ಮಂಗಳೂರು, ಸೆ. 02: ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಎಲ್ಲ ಬೆಲೆ ಹತೋಟಿಯಲ್ಲಿ ಇಟ್ಟಿದ್ದರು. ಮೋದಿ ಪ್ರಧಾನಿ ಆದ ಜನರಿಗೆ ನೀಡಿದ ಕೊಡುಗೆ ಎಂದರೆ ಬೆಲೆಯೇರಿಕೆ.

ಮನಮೋಹನ್ ಸಿಂಗ್ ಪ್ರಧಾನಿ  ಆಗಿದ್ದಾಗ ಬ್ಯಾರೆಲ್ ಕಚ್ಚಾ ತೈಲದ ಬೆಲೆ 112 ಡಾಲರ್ ಇದ್ದರೂ ಡೀಸೆಲ್‌ 61 ರೂಪಾಯಿಗೆ ಮತ್ತು ಪೆಟ್ರೋಲ್  67 ರೂಪಾಯಿಗೆ ಸಿಗುತ್ತಿತ್ತು. ಮೋದಿಯವರ ಕಾಲದಲ್ಲಿ ಕಚ್ಚಾ ತೈಲ ಬ್ಯಾರೆಲ್ ಬೆಲೆ 64. ಡಾಲರ್ ಇದ್ದರೂ ಈಗ ಡೀಸೆಲ್‌  94 ರೂಪಾಯಿ ಮತ್ತು ಪೆಟ್ರೋಲ್ 104 ರೂಪಾಯಿಗೆ ಮಾರಾಟವಾಗುತ್ತಿದೆ. 23,000 ಕೋಟಿ ರೂಪಾಯಿ ಲಾಭ ಮಾತ್ರ ಮೋದಿ ಸರಕಾರದ ಗುರಿಯೆ ಎಂದು ಮಮತಾ ಗಟ್ಟಿ ಪ್ರಶ್ನಿಸಿದರು.

ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಗೃಹ ಬಳಕೆ ಅಡುಗೆ ಅನಿಲದ ಬೆಲೆ 354 ರೂಪಾಯಿ ಇತ್ತು. ಮೋದಿ ಕಾಲದಲ್ಲಿ ಈ ಸಿಲಿಂಡರ್ ಬೆಲೆ ರೂ. 884 ಆಗಿದೆ. ಹಳ್ಳಿ ಮನೆ ಮುಟ್ಟುವಾಗ ರೂ. 915 ಆಗುತ್ತದೆ ಮೋದಿ ಸರಕಾರದ ಹಬ್ಬದ ಕೊಡುಗೆಯೇ ಇದು ಎಂದು ಮಮತಾ ಗಟ್ಟಿ ಕೇಳಿದರು.

ಮೊದಿ ಸರಕಾರ ಮತ್ತು ಬಿಜೆಪಿ ಉಜ್ವಲ ಯೋಜನೆ ಬಗೆಗೆ ಭಾರೀ ಪ್ರಚಾರ ಪಡೆಯಿತು. 9,700 ಕೋಟಿ ರೂಪಾಯಿಯ ಉಜ್ವಲ ಯೋಜನೆಯ ಹಣ ಏನಾಯಿತು? ಜನರಿಗೆ ಮಾತ್ರ ಉಚಿತ ಗ್ಯಾಸ್ ಸಂಪರ್ಕ ದೊರಕಿಲ್ಲ ಎಂದು ಮಮತಾ ಗಟ್ಟಿ ಆಪಾದಿಸಿದರು.

ಜನರು ಬದುಕುವುದನ್ನು ಕಷ್ಟ ಮಾಡಿರುವುದಷ್ಟೆ ಬಿಜೆಪಿ ಕೊಡುಗೆ. ಶೋಭಾ ಕರಂದ್ಲಾಜೆ ಮೊದಲಾದ ಬಿಜೆಪಿ ನಾಯಕಿಯರು ಹಿಂದೆ ಭಾರಿ ಪ್ರತಿಭಟನೆ ನಡೆಸಿದ್ದರು. ಈಗ ಇಷ್ಟು ಬೆಲೆಯೇರಿಕೆ ಆಗಿದ್ದರೂ ಇವರೇಕೆ ಬಾಯಿ ಬಿಡುತ್ತಿಲ್ಲ? ಸುಳ್ಳೇ ಈ ಸರಕಾರದ ಬಂಡವಾಳ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಂದ್ರಕಲಾ, ಅಪ್ಪಿ,‌ ಗೀತಾ, ಶೋಭಾ ಕೇಶವ್,ಸವಿತಾ ಮಿಸ್ಕಿತ್ ಮೊದಲಾದವರು ಉಪಸ್ಥಿತರಿದ್ದರು.