ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಹಿಂದುರುಗಿದ ಮೀರಾಬಾಯಿ ಚಾನು ಅವರಿಗೆ ದೆಹಲಿಯಲ್ಲಿ ಅದ್ಭುತ ಸ್ವಾಗತ ದೊರೆಯಿತು. ರೈಲ್ವೆ ಉದ್ಯೋಗಿಯಾದ ಮೀರಾರಿಗೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಸಂದರ್ಭದಲ್ಲಿ ಉದ್ಯೋಗ ಬಡ್ತಿ ಮತ್ತು ಎರಡು ಕೋಟಿ ರೂಪಾಯಿ ಕೊಡುಗೆ ಘೋಷಿಸಿದರು.
ಡೊಮಿನೋಸ್ ಈಗಾಗಲೇ ಚಾನು ಅವರಿಗೆ ಒಂದು ವರುಷ ಎಷ್ಟು ಬೇಕಾದರೂ ಪಿಜ್ಜಾ ಉಚಿತ ಎಂದು ಘೋಷಿಸಿದೆ. ಮಣಿಪುರದಲ್ಲೂ ಹಲವು ಕೊಡುಗೆಗಳು ಚಾನುಗಾಗಿ ಕಾದಿವೆ.