ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ವತಿಯಿಂದ, ಸಿಯೋನ್ ಆಶ್ರಮ್ ಟ್ರಸ್ಟ್,ಗಂಡಿ ಬಾಗಿಲು, ಬೆಳ್ತಂಗಡಿ. ಇವರ ಆಶ್ರಮದಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ದಂತ ತಪಾಸಣೆ ಶಿಬಿರ, ಮದುಮೇಹ ಮತ್ತು ಚರ್ಮರೋಗ ತಪಾಸಣೆ ಶಿಬಿರವನ್ನು ಏರ್ಪಡಿಸಲಾಯಿತು.
ಇದರ ಉದ್ಘಾಟನಾ ಸಮಾರಂಭವನ್ನು ಆಶ್ರಮದ ಸಂಸ್ಥಾಪಕರಾದ ಡಾ. U. C.ಪೌಲೋಸ್ ಕುಟುಂಬಸ್ಥರು, ಡಾ. ಮೇಘನ್ ಶೆಟ್ಟಿ, ಲಯನ್ ಕ್ಲಬ್ ಪುತ್ತೂರು ಕ್ರೌನ್ ಅಧ್ಯಕ್ಷ ಲಯನ್ ಅಂತೋನಿ ಓಲಿವೇರ, ಕ್ಲಬ್ ಸಂಸ್ಥಾಪಕ ಲಯನ್ ಲಾನ್ಸಿ ಮಸ್ಕರೇನಸ್ ರವರು ಚಾಲನೆ ಮಾಡಿ, ಶುಭಕೋರಿದರು.
ಎ ಜೆ ಹಾಸ್ಪಿಟಲ್ ನ ರಿಸರ್ಚ್ ಸೆಂಟರ್ ಮಂಗಳೂರು ಇವರ ಆಶ್ರಯದಲ್ಲಿ, ಡಾಕ್ಟರ್ ಮೇಘನ್ ಶೆಟ್ಟಿ ಯವರ ನೇತೃತ್ವದಲ್ಲಿ ಈ ಶಿಬಿರವನ್ನು ಆಯೋಜಿಸಲಾಯಿತು. ಒಟ್ಟು 18 ವೈದ್ಯರು, 17 ಸಿಬಂದಿಗಳು ತಮ್ಮ ಸೇವೆಯನ್ನು ನೀಡಿದಾರೆ.
1.ಉಚಿತ, ಆರೋಗ್ಯ ತಪಾಸಣೆ
2.ಮಧುಮೇಹ ತಪಾಸಣೆ
3. ಕಣ್ಣಿನ ತಪಾಸಣೆ
4. ಚರ್ಮರೋಗ ತಪಾಸಣೆ
5. ದಂತ ತಪಾಸಣೆ ಯನ್ನು ಈ ಶಿಬಿರದಲ್ಲಿ, ಬೆಳಗ್ಗೆ 10ಘಂಟೆ ಯಿಂದ,2 ಘಂಟೆ ಯವರೆಗೆ ನಡೆಸಲಾಯಿತು.
ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಅಧ್ಯಕ್ಷರಾದ ಲಯನ್ ಅಂತೋನಿ ಒಲಿವೇರ, ಕ್ಲಬ್ ಸಂಸ್ಥಾಪಕ ಲಯನ್ ಲ್ಯಾನ್ಸಿ ಮಸ್ಕರೇನಸ್, ಕ್ಲಬ್ ಕಾರ್ಯದರ್ಶಿ ಲಯನ್ ಲೀನಾ ಮಚಾದೊ, ಲಯನ್ ಅನಿತಾ ಜ್ಯೋತಿ ಡಿಸೋಜ, ಲಯನ್ ಐವನ್ ಫೆರ್ನಾಂಡಿಸ್, ಲಯನ್ ಲೀನಾರೇಗೋ, ಲಯನ್ ಬೆಂಜಮಿನ್ ಡಿಸೋಜ ರವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.