ಮಂಗಳೂರು, ಆಗಸ್ಟ್ 18: ನಾನು ಹುಬ್ಬಳ್ಳಿ ಧಾರವಾಡಗಳಲ್ಲಿ ಜನಾಶೀರ್ವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಈಗ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದೇನೆ. ಎಲ್ಲ ಕಡೆ ನಾವು ಜನ ನಮ್ಮೊಂದಿಗೆ ಇರುವುದನ್ನು ಕಂಡೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ನಮ್ಮ ದೇಶದ ಭವಿಷ್ಯ ಇಂದಿನ ಮಕ್ಕಳು ಮತ್ತು ಯುವಜನರ ಮೇಲೆ ಇದೆ. ಆದ್ದರಿಂದ ಕೌಶಲ್ಯ ತರಬೇತಿ ಬಹಳ ಮುಖ್ಯ. ಅದಕ್ಕೆ ದಕ್ಷಿಣ ಕನ್ನಡದಲ್ಲಿ ಉತ್ತಮ ಅವಕಾಶ ಇದೆ ಎಂದು ಸಚಿವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಐಟಿ ಹಬ್ ಬೇಕು ಎಂದು ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಕೇಳಿದ್ದಾರೆ. ನಿಜ ಮಂಗಳೂರಿನಲ್ಲಿ ಐಟಿಗೆ ವಿಶೇಷ ಅವಕಾಶವಿದೆ ಅದನ್ನು ತರುತ್ತೇವೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದರು.
ಕೇಂದ್ರ ಸರಕಾರವು ಎಲ್ಲರನ್ನೂ ತಾಂತ್ರಿಕ ತಜ್ಞರಾಗಿಸುವ ಯೋಜನೆ ಹೊಂದಿದೆ. ನನ್ನ ಸಚಿವ ಖಾತೆ ಅದಕ್ಕೆ ಬದ್ಧವಾಗಿದೆ. ದೂರ ಶಿಕ್ಷಣ ಯೋಜನೆ ಸಹ ಇದಕ್ಕೆ ಸಹಕಾರಿ ಎಂದೂ ಮಂತ್ರಗಳು ತಿಳಿಸಿದರು.
ಸರಕಾರದ ಬೆಂಬಲವಿಲ್ಲದೆ ಕೇಬಲ್ ಉದ್ಯಮವು ಕಳೆದೆರಡು ದಶಕಗಳಲ್ಲಿ ದೇಶದಲ್ಲಿ ಬೆಳೆದಿದೆ. ಟೆಲಿಕಾಂ ಕೂಡ ಸರಕಾರದ ಬೆಂಬಲದ ಜೊತೆಗೆ ಖಾಸಗಿ ವಲಯದಿಂದ ಬಲಿತು ಬೆಳೆಯಬೇಕು ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ನಳಿನ್ ಕುಮಾರ್ ಕಟೀಲ್ ಅವರು ಮುಡಿಪುನಲ್ಲಿ ಐಟಿ ಪಾರ್ಕ್ ಬರುವುದನ್ನು ಗಟ್ಟಿಯಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಅಂಗಾರ, ದ. ಕ. ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಶಾಸಕರಾದ ವೇದವ್ಯಾಸ ಕಾಮತ್, ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು