ಬ್ಯಾಂಕ್ ಕೆಲಸ ಕೊಡಿಸುವುದಾಗಿ ಯುವತಿಯಿಂದ ಹಣ ಪಡೆದು, ಕೆಲಸ ಕೊಡಿಸದೆ, ರೇಪ್ ಮಾಡಿ, ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದ ನಟ ಶೇಷಗಿರಿ ನಟರಾಜ್‌ನನ್ನು ಬಂಧಿಸಲಾಗಿದೆ  ಎಂದು ಬೆಂಗಳೂರು ಪೋಲೀಸು ಮೂಲಗಳು ತಿಳಿಸಿವೆ.

ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೋಲೀಸರು ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಶೇಷಗಿರಿಯನ್ನು ಮೈಸೂರಿನಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್ ಉದ್ಯೋಗಿ ಆಗಿದ್ದ ಶೇಷಗಿರಿ ಸಿನಿಮಾ ನಟನಾಗಲು ಮೂರು ವರುಷಗಳ ಹಿಂದೆ ಉದ್ಯೋಗ ಬಿಟ್ಟಿದ್ದ. ಮೂರ್ನಾಲ್ಕು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ.