ಒಕ್ಕೂಟ ಸರಕಾರದ ಹೆದ್ದಾರಿ ಮತ್ತು ಸಾರಿಗೆ ಮಂತ್ರಿ ನಿತಿನ್ ಗಡ್ಕರಿಯವರು ನಾಲ್ಕು ವರುಷದೊಳಗಿನ ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯಲು ಕೆಲವು ನಿಯಮಗಳನ್ನು ಪ್ರಕಟಿಸಿದ್ದು, ಸದ್ಯವೇ ಅದು ಕಾಯ್ದೆಯಾಗಲಿದೆ ಎಂದು ವಿವರಿಸಿದ್ದಾರೆ.

ಮಗು ಮತ್ತು ಸವಾರರನ್ನು ಬೆಸೆಯುವ ಸುರಕ್ಷಾ ಪಟ್ಟಿ ಧರಿಸಬೇಕು, ಕ್ರಾಶ್ ಹೆಲ್ಮೆಟ್ ತೊಟ್ಟಿರಬೇಕು, ಅಂಥ ಮಗುವನ್ನು ಕರೆದೊಯ್ಯುವಾಗ ಬೈಕ್ ವೇಗ 40 ಕಿಮೀ ಮೀರಬಾರದು ಎನ್ನುವುದು ಮುಖ್ಯ ನಿಯಮಗಳಾಗಿವೆ.