ಉಡುಪಿ: ಕರ್ನಾಟಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆಸಿದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ತುಳು ಭಾಷಣ ವಿಭಾಗದಲ್ಲಿ ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹತ್ತನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ರಶ್ಮಿತಾ ಪ್ರಥಮ ಸ್ಥಾನವನ್ನು ಪಡೆದು ನಾಲ್ಕು ಸಾವಿರ ರೂಪಾಯಿ ನಗದು ಮತ್ತು ಶಾಶ್ವತ ಫಲಕವನ್ನು ತನ್ನದಾಗಿಸಿಕೊಂಡಿದ್ದಾಳೆ. ಇವಳು ಕಾಪು ಚಂದ್ರನಗರ ನಿವಾಸಿಗಳಾದ ಕಾಂತಿ ರಮೇಶ ಮೂಲ್ಯ ದಂಪತಿಗಳ ಪುತ್ರಿ.
