ಸಾಂಪ್ರದಾಯಿಕತೆಯಿಂದ ಕಳಚಿಕೊಳ್ಳುತ್ತಿರುವ ಸೌದಿ ಅರೇಬಿಯಾವು ಈಗ ಮಹಿಳೆಯೊಬ್ಬರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ಪ್ರಕಟಿಸಿದೆ.
ಸೌದಿ ಅರೇಬಿಯಾದ ಮಹಿಳೆ 27ರ ಪ್ರಾಯದ ರಯಾನಾ ಬರ್ನಾವಿ ಗಗನಗಾಮಿಯಾಗುವ ಮೊದಲ ಕೊಲ್ಲಿ ದೇಶದ ಮಹಿಳೆ. ಮುಂದಿನ ತಿಂಗಳ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಯಾನದಲ್ಲಿ ಭಾಗಿಯಾಗಲು ರಯಾನಾ ಈಗ ತೀವ್ರ ತರಬೇತಿಯಲ್ಲಿ ಇದ್ದಾರೆ.