ಮೇ 2ರ ಆಮ್ಲಜನಕ ಇಲ್ಲದೆ ಉಂಟಾದ ಸಾವು ನೋವುಗಳಿಂದ ಹೊರಬರುವುದಕ್ಕೆ ಮೊದಲೇ 20  ಕೊರೋನಾ ಸಾವುಗಳಿಂದ‌ ಚಾಮರಾಜನಗರ ‌ನಿನ್ನೆ ಶಾಕ್‌ ಅನುಭವಿಸಿತು.

ಮೇ 2ರಂದು ಒಂದೇ ದಿನ 24 ಜನ ಆಮ್ಲಜನಕ ಸಿಗದೆ ಕೊರೋನಾಕ್ಕೆ ಬಲಿಯಾಗಿದ್ದರು. ಅದೇ ಚಾಮರಾಜನಗರದಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಸಂಜೆ‌ 6 ಗಂಟೆಯವರೆಗೆ ಕೋವಿಡ್‌ಗೆ 20 ಜನ ಬಲಿಯಾದರು. ಇದೇ ಅವಧಿಯಲ್ಲಿ 910 ಹೊಸ ಕೊರೋನಾ ಸೋಂಕಿತರು ಇಲ್ಲಿ ‌ಕಂಡುಬಂದರು.

ಎರಡನೆಯ ಅಲೆಯಲ್ಲೂ‌ ಮಂಗಳೂರು ಕೊರೋನಾ ‌ಭಯದಿಂದ ಮುಕ್ತವಾಗಿಲ್ಲ. ಭಾನುವಾರ ಮಂಗಳೂರಿನಲ್ಲಿ ಇಬ್ಬರು ಕೊರೋನಾದಿಂದ ಅಸು ನೀಗಿದರು. ಜಿಲ್ಲೆಯಲ್ಲಿ ಕೋವಿಡ್ ಕೊಂದ‌ ಜನರ ಸಂಖ್ಯೆ 785ಕ್ಕೆ ಏರಿತು. ನಿನ್ನೆ ಮತ್ತೆ 694 ಹೊಸ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾದರು.