ಜೆಡಿಎಸ್ ಪಕ್ಷವು ಜಾತ್ಯಾತೀತ ನೀತಿಯನ್ನು ಬಿಟ್ಟು ಬಹಳ ಕಾಲವಾಗಿದೆ. ಅದು ಬಸವರಾಜ ಬೊಮ್ಮಾಯಿ, ಬಿಜೆಪಿ ಸರಕಾರಕ್ಕೆ ಹತ್ತಿರವಾದರೆ ವಿಶೇಷವೇನೂ ಇಲ್ಲ ಎಂದು ಸೋಮವಾರ ಕಾಂಗ್ರೆಸ್ ನಾಯಕ, ಮಾಜೀ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಹೇಳಿದರು.
ನಾನು ಅಲ್ಲಿಂದ ಬಂದವನು. ಅದರ ಜಾತ್ಯಾತೀತ ನೀತಿ ಆಗಲೇ ಕರಗತೊಡಗಿತ್ತು. ಈಗ ಬಟಾಬಯಲಾಗಿದೆ. ಜಾತ್ಯಾತೀತತೆ ಇಲ್ಲದಿರುವುದರಿಂದಲೆ ಅವರು ಬೋರ್ಡಿನಲ್ಲಿ ಆ ಶಬ್ದ ಹಾಕಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳಿದರು.