ಆಮ್ಲಜನಕ ಸಿಗದೆ ಯಾವ ಕೋವಿಡ್ ಬಾಧಿತರೂ ಮರಣಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಹಾಯಕ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಅವರ ವಿರುದ್ಧ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಿದೆ.
ಈ ಬಗೆಗೆ ಕಾಂಗ್ರೆಸ್ ನಾಯಕ ಕೆ. ಸಿ. ವೇಣುಗೋಪಾಲ ಅವರು ನಮ್ಮ ಹಕ್ಕು ಚ್ಯುತಿ ಮಂಡನೆ ಏನಾಯಿತು ಎಂದು ಪ್ರಶ್ನಿಸಿದರು.
ಸಭಾಪತಿಯಾಗಿದ್ದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಪರಿಶೀಲನೆ ನಡೆದಿದೆ, ತಿಳಿಸಲಾಗುವುದು ಎಂದರು. ಪ್ರತಿ ಪಕ್ಷಗಳು ಈ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.