ಕಪ್ಪು ಬಣ್ಣದವರಿಗೆ ಸಿಗದ ಕೆಲಸ, ಬಿಳಿಯರ ಕುಟುಂಬ ಇತ್ಯಾದಿ ವಿಷಯದ ದಕ್ಷಿಣ ಆಫ್ರಿಕಾದ ಲೇಖಕ ಡೇಮನ್ ಗಾಲ್ಗಟ್ ಅವರ ದ ಪ್ರಾಮಿಸ್ ಕಾದಂಬರಿಗೆ ಈ ಬಾರಿಯ ಬೂಕರ್ ಪ್ರಶಸ್ತಿ ದಕ್ಕಿದೆ.
ಬೂಕರ್ ಪ್ರಶಸ್ತಿಯು 50,000 ಪೌಂಡ್ ಎಂದರೆ 50,00,000 ರೂಪಾಯಿಗಳ ನಗದು ಬಹುಮಾನ ಹೊಂದಿದೆ.
2003ರಲ್ಲಿ ದ ಗುಡ್ ಡಾಕ್ಟರ್, 2010ರಲ್ಲಿ ಇನ್ ಎ ಸ್ಟ್ರೇಂಜ್ ರೂಂ ಎಂಬ ಡೇಮನ್ ಗಾಲ್ಗಟ್ ಅವರ ಕಾದಂಬರಿಗಳು ಸಹ ಬೂಕರ್ ಆಯ್ಕೆ ಪಟ್ಟಿಯಲ್ಲಿ ಇದ್ದವು. ಮೂರನೆಯ ಬಾರಿ ಅವರು ಬೂಕರ್ ಪ್ರಶಸ್ತಿ ವಿಜೇತರಾದರು.