ಪರಮ ಪೂಜ್ಯ 108 ದಿವ್ಯ ಸಾಗರ ಮುನಿ ರಾಜರ ಪಾವನ ಸಾನಿಧ್ಯ ಆಶೀರ್ವಾದ ದೊಂದಿಗೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜ ಜೈನ ಕಾಶಿ ಶ್ರೀ ದಿಗಂಬರ ಮಠ ಮೂಡುಬಿದಿರೆ ಇವರ ಮಾರ್ಗದರ್ಶನ ಉಪಸ್ಥಿತಿ ಯಲ್ಲಿ 03.11.21 ರಂದು ವಜ್ರ ಲೇಪನ ಗೊಂಡ ಪ್ರಾಚೀನ ಬಿಂಬ ದ ಮಂತ್ರ ಜಲ ದಿಂದ ಧೂಲಿ ಕಲಶ ದ್ವಾದಶ ಪಲ್ಲವ ಕಲಶ, ದ್ರವ್ಯ, ಸಪ್ತ ಔಷದಿ, ಫಲ ಪಂಚ, ದಿವ್ಯ ಔಷಧಿ, ಸರ್ವ ಔಷದಿ ಕಲಶ ಗಳಿಂದ ಶುದ್ದಿ,ಅಭಿಷೇಕ ನೆರವೇರಿಸಿ ವಿಮಾನ ಶುದ್ದಿಮಾಡಿ ಬಿಂಬ ಅಕ್ಷರ ನ್ಯಾಸ ಗುಣರೋಪಣೆ ಮಾಡಿ ಸೂರಿ ಮಂತ್ರನೀಡಿ1100 ವರ್ಷ ಪುರಾತನ ಬಸದಿ ಯ ಬಿಂಬ ಪ್ರತಿಷ್ಠೆ ಮಧ್ಯಾಹ್ನ 12.15 ಕ್ಕೆ 108 ದಿವ್ಯ ಸಾಗರ ಮುನಿರಾಜ ರು ಹಾಗೂ ಸ್ವಸ್ತಿಶ್ರೀ ಸ್ವಾಮೀಜಿ ನೆರವೇರಿಸಿದರು.

ಈ ಸಂಧರ್ಭ ಕೆ ಅಭಯ ಚಂದ್ರ ಜೈನ್, ಪಟ್ಣ ಶೆಟ್ಟಿ ಸುದೇಶ್, ದಿನೇಶ್ ಕುಮಾರ್, ಆದರ್ಶ್,ಬಸದಿ ಮುಕ್ತೇಸರ ರು, ವಿಜಯ ಕುಮಾರ್ ಜೈನ ಪುತ್ತೂರು ಶ್ರೀಧರ್ ಕಡಂಬ,ಪದ್ಮರಾಜ್ ನೇರoಕಿ, ಶಂಭವ ಕುಮಾರ್ ಪಾರ್ಶ್ಶ್ವನಾಥ,ಡಾ ಪ್ರಭಾತ್,ಜಗದೀಶ್ ಅಜ್ರಿ ಶಿಶುಪಾಲ್, ಸನತ್ಕುಮಾರ್, ಧೀರಜ್ ಪ್ರವೀಣ್, ಚಕ್ರೆಶ್ ಅರಿಗಾ ಸ್ಥಾನೀಯ ಜೈನ ಸಮಾಜದ ಪ್ರಮುಖ ರು ಕಲಶ ಪಡೆದು ಅಭಿಷೇಕ ದಲ್ಲಿ ಭಾಗವಹಿಸಿ ಪುಣ್ಯ ಬಾಗಿ ಗಳಾದರು ಶ್ರೀಜೈನ ಮಠ ದ ವತಿಯಿಂದ ಬಿಂಬ ಪ್ರತಿಷ್ಠೆ ನೆರವೇರಿತು.

ಶ್ರೀ ಮಠ ದ ಭಕ್ತ ರಾದ ಚಿನ್ನ ದ ವ್ಯಾಪಾರಿ ಅತುಲ್ ಶಾಹ ಭಾರಮತಿ ಮಹಾರಾಷ್ಟ್ರ ರೂಪಾಯಿ ನಾಲ್ಕು ಲಕ್ಷ ನೀಡಿ ವಜ್ರ ಲೇಪನ ಕಾರ್ಯ ಕ್ಕೆ ಸಹಕರಿಸಿದ್ದರು.

ಬಳಿಕ ಆಶೀರ್ವಾದ ನೀಡಿದ ಮುನಿ ವರ್ಯ ರು ಅಜೀರ್ಣ ಗೊಂಡ ಬಸದಿ ಜಿನ ಬಿಂಬ ಜೀರ್ಣೋದ್ದಾರ ಗೊoಡಿದೆ ಶ್ರದ್ದೆ ಭಗವಂತ ನಲ್ಲಿ ಮಾಡಿದಾಗ ಜೀವನದಲ್ಲಿ ಧನ್ಯತೆ ಎಂದರು.

ಭಟ್ಟಾರಕ ರು ಜೀರ್ಣೋದ್ದಾರ ಕಾರ್ಯ ದಲ್ಲಿ ಸಹಕರಿಸಿದ ಸಮಸ್ತ ರಿಗೆ ಶುಭಾಶೀರ್ವಾದ ತಿಳಿಸಿ ಬಸದಿ ಸಮವಸರಣ ಧರ್ಮ ದ ಕೇಂದ್ರಇಲ್ಲಿ ನಿತ್ಯ ಭಕ್ತ ರು ದರ್ಶನ ಮಾಡಿದಾಗ ಜೀವನ ಸಾರ್ಥಕ ಎಂದು ನುಡಿದರು.

ಬಳಿಕ ಶ್ರೀ ಮಠ ದಲ್ಲಿ ಸಾಮೂಹಿಕ ಅನ್ನದಾನ ನೆರವೇರಿತು.