ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮುತ್ತುವೇಲು ಕರುಣಾನಿಧಿ ಸ್ಟಾಲಿನ್ ಅವರು ಶುಕ್ರವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಿದರು.
ಕೊರೋನಾ ಕಾರಣ ಸರಳ ಸಮಾರಂಭದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌ರು ಪ್ರಮಾಣವೊ ಬೋಧನೆ ಮಾಡಿದರು.
ಸ್ಟಾಲಿನ್ ಜೊತೆ 33 ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಪಡೆದರು. ಗೃಹ ಖಾತೆ ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದಾರೆ ಎನ್ನಲಾಗಿದ್ದರೂ ಪೂರ್ಣ ಖಾತೆ ಹಂಚಿಕೆ ಇನ್ನೂ ಮುಗಿದಿಲ್ಲ.
1967ರಲ್ಲಿ ಮೊದಲ ಬಾರಿಗೆ ಡಿಎಂಕೆ ಅಧಿಕಾರಕ್ಕೆ ಬಂದು ಅಣ್ಣಾದೊರೈ ಮುಖ್ಯಮಂತ್ರಿ ಆಗಿದ್ದರು. ಅವರ ಅಕಾಲಿಕ ಮರಣದ ಬಳಿಕ 1970ರಲ್ಲಿ ಮುತ್ತುವೇಲು ಕರುಣಾನಿಧಿ ಮುಖ್ಯಮಂತ್ರಿ ಆಗಿದ್ದರು. ಸ್ಟಾಲಿನ್ ಅವರ ಮಗ.