ಕರ್ನಾಟಕಕ್ಕೆ ಪ್ರತಿ ದಿನ 1,200 ಟನ್ ಆಮ್ಲಜನಕ ಪೂರೈಸಬೇಕು ಎಂಬ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು.

ಮೊನ್ನೆ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಕೇಂದ್ರ ಸರಕಾರವು ತಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಧೀಶರುಗಳಾದ ವೈ. ವಿ. ಚಂದ್ರಚೂಡ್, ಎಂ. ಆರ್. ಶಾ ಅವರಿದ್ದ ನ್ಯಾಯ ಪೀಠವು ಈ ಕೇಸಿನ ವಿವರ ಕರ್ನಾಟಕ ಹೈಕೋರ್ಟ್‌ನಲ್ಲಿ ಇರುವುದರಿಂದ ಪೂರ್ಣ ಪರಿಶೀಲಿಸದೆ ತಡೆ ನೀಡಲು ಸಾಧ್ಯವಿಲ್ಲ ಎಂದಿತು. ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತೆ ಮನವಿ ಮಾಡಿದಾಗ ಪೀಠವು ಕರ್ನಾಟಕದೊಡನೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿತು.