ಮರದ ಮೇಲಿನ‌ ಕೋತಿಯಣಕಿಸಿದರಣಕಿಪುದು

ಬರಿ ಕಲ್ಲನೆಸೆದರೆ ಹಣ್ಣನೊಗೆದು ಹಾರುವುದು

ಮೆರೆ ಜೀವನದ ಮಜಲಲಿ ಕೆಡುಕ ಬಗೆದಾತಂಗೆ

ಬೀರುತಲಿ ಸವಿನೆನಪ ಧೀರತಮ್ಮ.

- ಡಾ.ಸುರೇಶ ನೆಗಳಗುಳಿ