ಮೋಡದ ಮರೆಯಿಂದ

ರಾಯರು ಇಣುಕಿದರು

ಈದ್ ಮಾಡಿದರು.


ಉಗುಳನೂ ನುಂಗದ

ನಿಷ್ಠಾವಂತರು

ಕಂಡು ಮುಗುಳ್ನಕ್ಕರು.


ತನ್ನಯ ಒಡಲಿನಿಂದ

ಜಕಾತ್ ನೀಡುವವರು

ಭೇಷ್ ಅಂದರು.


ಅಲ್ಲಾಹ್ ನ ಮುಂದೆ

ಬನ್ನೀ ಎಲ್ಲಾರೂ

ಆಲಂಗಿಸೋಣ ಎಂದರು.


ಮೋಡವು ಸರಿದಿದೆ

ನೆರೆ ಮನೆ ಬೆಳಕಿದೆ

ಕಿಟಕಿಯು ತೆರೆದಿದೆ ಎಂದರು.


ರೇಮಂಡ್ ಡಿಕೂನ