ಭಗವಂತನ ಅಧ್ಭುತ ಸೃಷ್ಟಿಯವಳು

ಮಗುವಿಗೆ ಜೀವ ನೀಡುವವಳು

ಭಗವಂತನಿಗೆ ಮಿಗಿಲಾದವಳು

ತನಗಿಂತಲೂ ತನ್ನವರನ್ನ ಪ್ರೀತಿಸುವವಳು


ತನ್ನ ಹೊಟ್ಟೆಕಟ್ಟಿ ಮಕ್ಕಳ ಹೊಟ್ಟೆ ತುಂಬಿಸುವವಳು

ಹೇಳದೇ ಮಗುವಿನ ನೋವುಗಳನ್ನ ಅರಿಯುವವಳು

ಮಗುವಿಗಾಗಿ ಬದುಕುವವಳು

ಮಗುವಿಗಾಗಿ ಜಗತ್ತಿನ ವಿರುದ್ಧ ಹೋರಾಡುವವಳು


ಮಗುವಿಗಾಗಿ ಸರ್ವಸ್ವವನ್ನು ತ್ಯಾಗ ಮಾಡುವವಳು

ಮಗುವನ್ನೇ ತನ್ನ ಜಗತ್ತಾಗಿ ಸ್ವೀಕರಿಸುವವಳು

ಮಗುಗೆ ಎಷ್ಟೇ ವರುಷಗಳ ಕಳೆದರೂ ಪ್ರೀತಿಸುವವಳು

ಮಗವಿನ ಏಳಿಗೆಯನ್ನೇ ಸದಾ ಬಯಸುವವಳು


ಅಮ್ಮ ಎನ್ನುವ ಪದವೆ ಅಮೋಘ

ಅಮ್ಮನ ಮಡಿಲೆ ಸ್ವರ್ಗ

ಅಮ್ಮನ ಕೈ ತುತ್ತೇ ಅಮೃತ

ಅಮ್ಮನ ಪ್ರೀತಿಗೆ ಸಾಟಿನೇ ಇಲ್ಲ


ರೇಷ್ಮಾ ಶೆಟ್ಟಿ